Monday, August 8, 2022

Latest Posts

ಕೇರಳದಲ್ಲಿ ಎಲ್ಲ ಸಾವುಗಳು ಕೊರೋನಾದಿಂದಲ್ಲ: ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್

ತಿರುವನಂತಪುರ: ಪ್ರಾಥಮಿಕ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಆಗಿ ಸಂಶಯಿಸಲಾಗುವ ಎಲ್ಲ ಸಾವುಗಳನ್ನು ಕೊರೋನಾ ಅಥವಾ ಕೋವಿಡ್ ನಿಂದ ಸಂಭವಿಸಿದ ಮರಣ ಎಂದು ಲೆಕ್ಕಹಾಕಲು ಸಾಧ್ಯವಿಲ್ಲ ಎಂದು ರಾಜ್ಯ ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿರುವನಂತಪುರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಕೋವಿಡ್ ಸಾವು ಪ್ರಕರಣವನ್ನು ಕೇರಳದಲ್ಲಿ ಲೆಕ್ಕಹಾಕಲಾಗುತ್ತಿದೆ. ಕೊರೋನಾ ವೈರಸ್ ಸೋಂಕು ಬಾಧಿಸಿ ಶರೀರದ ಅವಯವಗಳ ಮೇಲೆ ದುಷ್ಪರಿಣಾಮ ಬೀರಿ ಅದು ಗಂಭೀರಾವಸ್ಥೆಗೆ ತಲುಪಿ ಅದರಿಂದಾಗಿ ಸಂಭವಿಸುವ ಸಾವುಗಳನ್ನು ಮಾತ್ರವೇ ಕೋವಿಡ್ ಸಾವು ವಿಭಾಗದಲ್ಲಿ ಸೇರಿಸಲಾಗುವುದು ಎಂದು ಅವರು ತಿಳಿಸಿದರು.
ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿರುವುದು ಆರೋಗ್ಯ ಇಲಾಖೆಯ ತಜ್ಞರ ತಂಡವಾಗಿದೆ. ಇತರ ಯಾವುದೇ ರೋಗ ಬಾಧಿಸಿ ಗಂಭೀರಾವಸ್ಥೆಗೆ ತಲುಪಿ ವ್ಯಕ್ತಿ ಸಾವನ್ನಪ್ಪುವ ಅಂತಿಮ ಕ್ಷಣದಲ್ಲಿ ಅವರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾದಲ್ಲಿ ಅಂತಹವರ ಸಾವನ್ನು ಕೋವಿಡ್ ಮರಣ ವಿಭಾಗದಲ್ಲಿ ಒಳಪಡಿಸಲು ಸಾಧ್ಯವಿಲ್ಲವೆಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss