ಹೊಸ ದಿಗಂತ ವರದಿ, ಕಾಸರಗೋಡು:
ಕೋವಿಡ್ ಕಾರಣದಿಂದ ಮುಚ್ಚಲ್ಪಟ್ಟ ರಾಜ್ಯದ ಕಾಲೇಜುಗಳು ಜನವರಿಯಲ್ಲಿ ಮತ್ತೆ ತೆರೆಯಲಿವೆ. ವೃತ್ತಿಪರ ಕಾಲೇಜುಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಜನವರಿ 4ರಂದು ಮತ್ತೆ ತೆರೆಯುವಂತೆ ಸರಕಾರವು ಆದೇಶಿಸಿದೆ.
ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಐದು ಅಥವಾ ಆರು ಸೆಮಿಸ್ಟರ್ ಪದವಿ ತರಗತಿಗಳು ಮತ್ತು ಪೂರ್ಣ ಪಿ.ಜಿ. ತರಗತಿಗಳನ್ನು ಪ್ರಾರಂಭಿಸಲಾಗುವುದು.
ಡಿಸೆಂಬರ್ 28 ರಿಂದ ಪ್ರಾಂಶುಪಾಲರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಕಾಲೇಜುಗಳಿಗೆ ಹಾಜರಾಗಬೇಕು ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ತರಗತಿಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಶನಿವಾರಗಳು ಚಟುವಟಿಕೆ ದಿನಗಳಾಗಿರುತ್ತವೆ. ಬೆಳಗ್ಗೆ 8.30 ರಿಂದ ಸಂಜೆ 5.30ರ ವರೆಗೆ ತರಗತಿಗಳನ್ನು ನಡೆಸಲಾಗುತ್ತದೆ. ಅಗತ್ಯವಿದ್ದರೆ ಎರಡು ಪಾಳಿಗಳನ್ನು ವ್ಯವಸ್ಥೆಗೊಳಿಸಬಹುದು. ತರಗತಿಗಳು ಗರಿಷ್ಠ ಐದು ಗಂಟೆಯಾಗಿರುತ್ತವೆ.