Friday, August 19, 2022

Latest Posts

ಕೇರಳದಲ್ಲಿ ಕೊರೋನಾ ವೈರಸ್ ಸೋಂಕಿಗೆ ಮತ್ತೊಂದು ಬಲಿ: ಮೃತರ ಸಂಖ್ಯೆ ಐದಕ್ಕೆ ಏರಿಕೆ

ಕಾಸರಗೋಡು: ತ್ರಿಶೂರು ಜಿಲ್ಲೆಯಲ್ಲಿ ಗುರುವಾರ ತೀವ್ರ ನಿಗಾದಲ್ಲಿದ್ದ ವಯೋವೃದ್ದೆಯೋರ್ವರು ನಿಧನ ಹೊಂದುವ ಮೂಲಕ ಕೇರಳ ರಾಜ್ಯದ ಒಟ್ಟು ಕೋವಿಡ್ ಮರಣ ಸಂಖ್ಯೆ ಐದಕ್ಕೇರಿದೆ.

ಮೃತರನ್ನು ಚಾವಕ್ಕಾಡ್ ನಿವಾಸಿ ಖದೀಜಾಕುಟ್ಟಿ (73) ಎಂದು ಗುರುತಿಸಲಾಗಿದೆ. ಅವರು ಮುಂಬೈನಿಂದ ಬುಧವಾರ ಚಾವಕ್ಕಾಡ್ ತಲುಪಿದ್ದರು. ಮುಂಬೈಯಿಂದ ಪಾಲಕ್ಕಾಡ್‍ಗೆ ವಿಶೇಷ ವಾಹನದಲ್ಲಿ ಇತರ ಮೂವರೊಂದಿಗೆ ಆಗಮಿಸಿದ್ದರು. ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಗುರುವಾರ ಮುಂಜಾನೆ ಚಾವಕ್ಕಾಡ್ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಆದರೆ ರೋಗಿಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆಯೇ ಕೇರಳ ಸರ್ಕಾರ ಅವರನ್ನು ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲು ನಿರ್ಧರಿಸುತ್ತಿರುವಂತೆ ನಿಧನರಾದರು. ಅವರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದರು. ಅವರ ಸಕಾರಾತ್ಮಕ ಫಲಿತಾಂಶಗಳನ್ನು ಅನುಸರಿಸಿ ಆಕೆಯ ಪುತ್ರ ಮತ್ತು ಆಂಬ್ಯುಲೆನ್ಸ್ ಚಾಲಕನನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಗೆ ಒಳಪಡಿಸಿದೆ.

ಖದೀಜಾಕುಟ್ಟಿ ಗುರುವಾರ ಬೆಳಗ್ಗೆ ಮೃತಪಟ್ಟಿದ್ದರೂ, ಅದು ಕೋವಿಡ್ ಮರಣವೆಂದು ಘೋಷಿಸಲು ಅಧಿಕೃತರು ಮೊದಲು ಹಿಂದೇಟು ಹಾಕಿದ್ದರು. ಅವರ ಪರೀಕ್ಷಾ ಫಲಿತಾಂಶ ಗುರುವಾರ ತಡ ರಾತ್ರಿಯಷ್ಟೇ ಲಭ್ಯವಾಗಿದ್ದು ಬಳಿಕ ಕೋವಿಡ್ ಮರಣವೆಂದು ಘೋಷಿಸಲಾಯಿತು. ಈ ಮಧ್ಯೆ ಫಲಿತಾಂಶ ಲಭ್ಯವಾಗುವಲ್ಲಿ ತಡವಾಗಿರುವುದು ಹಲವು ಸಂಶಯಗಳಿಗೂ ಎಡೆಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!