Wednesday, August 10, 2022

Latest Posts

ಕೇರಳದಲ್ಲಿ ಕೋಮು ಸಂಘರ್ಷಕ್ಕೆ ಸಿಪಿಎಂ ಯತ್ನ: ಕೆ.ಸುರೇಂದ್ರನ್ ಆರೋಪ

ತಿರುವನಂತಪುರ: ಕೋಮು ಘರ್ಷಣೆಗೆ ಸಾಧ್ಯತೆ ಉಂಟಾಗುವಂತೆ ಹೇಳಿಕೆ ನೀಡಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ರ ವಿರುದ್ಧ ಕಠಿಣ  ಕೇಸು ದಾಖಲಿಸಬೇಕು ಎಂದು ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ರಾಜ್ಯದ ಮುಸ್ಲಿಂ ಸಮುದಾಯದ ಭಾವನೆಗಳನ್ನು ಕೆರಳಿಸಿ ಕೋಮು ಘರ್ಷಣೆ ಸೃಷ್ಟಿಸಿ ಭ್ರಷ್ಟಾಚಾರ ಮತ್ತು ವಂಚನೆಯನ್ನು ಮುಚ್ಚಿ ಹಾಕಲು ಸಿಪಿಎಂ ರಾಜ್ಯ ಕಾರ್ಯದರ್ಶಿ ಷಡ್ಯಂತ್ರ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದ್ದಾರೆ.
ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಆರೋಪಿಯಾದ ಕೇರಳದ ಸಚಿವ ಕೆ.ಟಿ.ಜಲೀಲ್ ಹಾಗೂ ಜ್ಯುವೆಲ್ಲರಿ ವಂಚನೆ ಕೇಸಿನಲ್ಲಿ ಸಿಲುಕಿರುವ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ರಾಜೀನಾಮೆ ನೀಡುವ ತನಕ ಬಿಜೆಪಿ ಹೋರಾಟ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ಸಿಪಿಎಂ ಮತ್ತು ಮುಸ್ಲಿಂಲೀಗ್ ನ ಯಾವುದೇ ಷಡ್ಯಂತ್ರಗಳಿಗೆ ಬಿಜೆಪಿ ಜಗ್ಗುವುದಿಲ್ಲ ಎಂದು ಕೆ.ಸುರೇಂದ್ರನ್ ತಿರುವನಂತಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss