Sunday, August 14, 2022

Latest Posts

ಕೇರಳದಲ್ಲಿ ಕೋವಿಡ್ ಹರಡದಂತೆ ತಡೆಗಟ್ಟಲು ಐಪಿಎಸ್ ಅಧಿಕಾರಿಗಳಿಗೆ ಹೊಣೆ

ಕಾಸರಗೋಡು: ಕಾಸರಗೋಡು ಜಿಲ್ಲೆಯೂ ಸೇರಿದಂತೆ ಕೇರಳದ 14 ಜಿಲ್ಲೆಗಳಲ್ಲೂ ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ರೋಗ ನಿಯಂತ್ರಣಕ್ಕೆ ವಿಶೇಷ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಕೊರೋನಾ ಸೋಂಕು ಇನ್ನಷ್ಟು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ಕೇರಳ ಸರಕಾರವು ಪೊಲೀಸರಿಗೆ ಮತ್ತಷ್ಟು ಹೆಚ್ಚಿನ ಅಧಿಕಾರ ನೀಡಿದೆ.
ಈ ಯೋಜನೆಯಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸ್ಪೆಷಲ್ ಯೂನಿಟ್ ಗಳಿಗೆ ರೂಪು ನೀಡಲಾಗಿದೆ. ಇದರ ಪ್ರತಿ ಜಿಲ್ಲೆಗಳ ಹೊಣೆಗಾರಿಕೆಯನ್ನು ತಲಾ ಓರ್ವ ಹಿರಿಯ ಐಪಿಎಸ್ ಅಧಿಕಾರಿಗೆ ವಹಿಸಿಕೊಡಲಾಗಿದೆ.
ಅಲ್ಲದೆ ಸಂಪರ್ಕದ ಮೂಲಕ ಕೋವಿಡ್ ರೋಗ ಹರಡುತ್ತಿರುವುದನ್ನು ಪತ್ತೆಹಚ್ಚಲು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳ ಓರ್ವ ಎಸ್ ಐ ನೇತೃತ್ವದಲ್ಲಿ ಮೂವರು ಪೊಲೀಸರನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಂಪರ್ಕದಿಂದ ರೋಗ ತಗಲಿದವರನ್ನು ಗುರುತಿಸಿ ಅವರ ಪಟ್ಟಿ ತಯಾರಿಸಿ ಅವರು ವಾಸಿಸುತ್ತಿರುವ ಪ್ರದೇಶಗಳನ್ನು ಪತ್ತೆಹಚ್ಚಿ ಅಲ್ಲಿ ಕಟ್ಟುನಿಟ್ಟಿನ ಕೊರೋನಾ ನಿಯಂತ್ರಣ ಕ್ರಮಗಳನ್ನು ಏರ್ಪಡಿಸಲು ಸೂಚಿಸಲಾಗಿದೆ. ಇದೇ ವೇಳೆ 50ಕ್ಕಿಂತ ಮೇಲ್ಪಟ್ಟ ಪ್ರಾಯದವರನ್ನು ರೋಗ ಪ್ರತಿರೋಧಕ ತಂಡಗಳಲ್ಲಿ ಸೇರಿಸದೇ ಇರುವ ತೀರ್ಮಾನವನ್ನು ಸರಕಾರ ಕೈಗೊಂಡಿದೆ.
ರೋಗ ನಿರ್ಮೂಲನೆ ಯೋಜನೆಯಂತೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಪೊಲೀಸರನ್ನು ಒಳಗೊಂಡ ವಿಶೇಷ ತಂಡಗಳನ್ನು ರೂಪಿಸಲಾಗುತ್ತಿದೆ. ಅಲ್ಲದೆ ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ವೈರಸ್ ಇನ್ನಷ್ಟು ಹೆಚ್ಚದಂತೆ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss