Thursday, August 11, 2022

Latest Posts

ಕೇರಳದಲ್ಲಿ ಗುರುವಾರ 2406 ಮಂದಿಗೆ ಕೋವಿಡ್ ಸೋಂಕು: 2067 ಜನರಿಗೆ ಗುಣಮುಖ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 231 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 223 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಮೂವರು ಇತರ ರಾಜ್ಯಗಳಿಂದ ಹಾಗೂ 5 ಮಂದಿ ವಿದೇಶದಿಂದ ಬಂದವರಾಗಿದ್ದಾರೆ. 85 ಮಂದಿ ಗುಣಮುಖರಾಗಿದ್ದಾರೆ.
ಅಜಾನೂರು-34, ಬಳಾಲ್-4, ಮಂಜೇಶ್ವರ-5, ಬದಿಯಡ್ಕ-4, ಕಾಸರಗೋಡು-21, ಎಣ್ಮಕಜೆ-2, ಪಳ್ಳಿಕೆರೆ-22, ಚೆಂಗಳ-7, ಮಧೂರು-10, ಬೇಡಡ್ಕ-1, ಚೆಮ್ನಾಡು-10, ಮೊಗ್ರಾಲ್‍ ಪುತ್ತೂರು-3, ಮಂಗಲ್ಪಾಡಿ-2, ಪೈವಳಿಕೆ-3, ಕುಂಬಳೆ-5, ಕಾಞಂಗಾಡು-12, ಕಳ್ಳಾರು-2, ನೀಲೇಶ್ವರ-8, ಕಯ್ಯೂರು ಚೀಮೇನಿ-3, ಪಡನ್ನ-1, ಕಿನಾನೂರು-2, ಮಡಿಕೈ-2, ಕಾರಡ್ಕ-13, ಪಿಲಿಕೋಡು-2, ಕೋಡೋಂ ಬೇಳೂರು-11, ವಲಿಯಪರಂಬ-25, ವೆಸ್ಟ್ ಎಳೇರಿ-1, ಚೆರ್ವತ್ತೂರು-2, ಪುತ್ತಿಗೆ-1, ಉದುಮ-13 ಎಂಬಂತೆ ರೋಗ ಬಾಧಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ 5532 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ
ವರದಿ ತಿಳಿಸಿದೆ. ಮನೆಗಳಲ್ಲಿ 4497 ಮಂದಿ, ಸಾಂಸ್ಥಿಕವಾಗಿ 1035 ಮಂದಿ ನಿಗಾದಲ್ಲಿರುವರು. ನೂತನವಾಗಿ 488 ಮಂದಿ ನಿಗಾ ಪ್ರವೇಶಿಸಿದ್ದಾರೆ. 386 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1504 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 969 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ಕೋವಿಡ್ ಪಾಸಿಟಿವ್ ಖಚಿತಗೊಂಡ ದಿನ ಗುರುವಾರ (ಆ.27) ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ 200ರ ಸಂಖ್ಯೆ ದಾಟಿದೆ. ಜು.22 ರಿಂದ ಈ ವರೆಗೆ 17 ಬಾರಿ ನೂರಕ್ಕಿಂತ ಅಧಿಕ ಪಾಸಿಟಿವ್ ಕೇಸುಗಳು ವರದಿಯಾಗಿವೆ ಎಂದವರು ಹೇಳಿದ್ದಾರೆ.
ಕೇರಳದಲ್ಲಿ ಗುರುವಾರ 2406 ಜನರಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಇದರಲ್ಲಿ 2175 ಮಂದಿಗೆ ಸಂಪರ್ಕದ ಮೂಲಕ ರೋಗ ಹರಡಿದೆ. 2067 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್‍ನಿಂದಾಗಿ 10 ಜನರು ಮೃತಪಟ್ಟಿದ್ದಾರೆ.
ಕೋವಿಡ್ ಕ್ವಾರಂಟೈನ್ ನ ಬಳಿಕ ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೊದಲ ಬಾರಿಗೆ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ತಿರುವನಂತಪುರ ಜಿಲ್ಲೆಯಲ್ಲಿ 352, ಕಲ್ಲಿಕೋಟೆ 238, ಕಾಸರಗೋಡು ಜಿಲ್ಲೆಯಲ್ಲಿ 231, ವಯನಾಡು 230, ಪಾಲಕ್ಕಾಡು 195, ಕೋಟ್ಟಾಯಂ 189, ಕೊಲ್ಲಂ 176, ಆಲಪ್ಪುಳ 172, ಪತ್ತನಂತ್ತಿಟ್ಟ 167, ತೃಶೂರು 162, ಎರ್ನಾಕುಳಂ 140, ಕಣ್ಣೂರು 102, ಮಲಪ್ಪುರಂ 27 ಹಾಗೂ ಇಡುಕ್ಕಿ ಜಿಲ್ಲೆಯಲ್ಲಿ 27 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2067 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 623, ಕೊಲ್ಲಂ 59, ಪತ್ತನಂತಿಟ್ಟ 37, ಆಲಪ್ಪುಳ 130, ಕೋಟ್ಟಾಯಂ 74, ಇಡುಕ್ಕಿ 28, ಎರ್ನಾಕುಳಂ 90, ತೃಶೂರು 95, ಪಾಲಕ್ಕಾಡು 56, ಮಲಪ್ಪುರಂ 538, ಕಲ್ಲಿಕೋಟೆ 90, ವಯನಾಡು 44, ಕಣ್ಣೂರು 119 ಮತ್ತು ಕಾಸರಗೋಡು ಜಿಲ್ಲೆಯ 85
ಮಂದಿಯ ಫಲಿತಾಂಶ ಋಣಾತ್ಮಕವಾಗಿದೆ. ಇದರೊಂದಿಗೆ 22,673 ಜನರಿಗೆ ಸೋಂಕು ಪತ್ತೆಯಾಗಿದ್ದು , ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 43,761 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಕೇರಳದಲ್ಲಿ ಕೋವಿಡ್ ಬಾಧಿಸಿ 10 ಸಾವುಗಳು ದೃಢಪಟ್ಟಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 267 ಕ್ಕೆ ಏರಿಕೆಯಾಗಿದೆ.
47 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ತಿರುವನಂತಪುರ ಜಿಲ್ಲೆಯಲ್ಲಿ 13, ತೃಶೂರು 8, ಎರ್ನಾಕುಳಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತಲಾ 6, ಮಲಪ್ಪುರಂ 5, ಆಲಪ್ಪುಳ 3, ಇಡಕ್ಕಿ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ 2, ಪಾಲಕ್ಕಾಡು ಮತ್ತು ವಯನಾಡು ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಎರ್ನಾಕುಳಂ
ಜಿಲ್ಲೆಯಲ್ಲಿ 4 ಐಎನ್‍ಎಚ್ಎಸ್ ನೌಕರರೂ ಸೋಂಕಿಗೊಳಗಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss