Wednesday, August 10, 2022

Latest Posts

ಕೇರಳದಲ್ಲಿ ಗುರುವಾರ 6119 ಮಂದಿಗೆ ರೋಗಮುಕ್ತಿ: 5537 ಜನರಿಗೆ ಕೊರೋನಾ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಗುರುವಾರ 5537 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತೃಶೂರು 727, ಕಲ್ಲಿಕೋಟೆ 696, ಮಲಪ್ಪುರಂ 617, ಆಲಪ್ಪುಳ 568, ಎರ್ನಾಕುಳಂ 489, ಪಾಲಕ್ಕಾಡು 434, ಕೊಲ್ಲಂ 399, ತಿರುವನಂತಪುರ 386, ಕಣ್ಣೂರು 346, ಕೋಟ್ಟಾಯಂ 344, ಇಡಕ್ಕಿ 185, ಪತ್ತನಂತ್ತಿಟ್ಟ 138, ಕಾಸರಗೋಡು 108, ವಯನಾಡು 100 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 57,202 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 9.68 ಆಗಿದೆ. ವಾಡಿಕೆಯ ಮಾದರಿಗಳು, ವಿಮಾನ ನಿಲ್ದಾಣ ಕಣ್ಗಾವಲು, ಪೂಲ್ಡ್ ಸೆಂಟಿನೆಲ್, ಸಿಬಿಎನ್ಎಟಿ, ಟ್ರುನಾಟ್, ಸಿಎಲ್ಐಎ ಮತ್ತು ಆಂಟಿಜೆನ್ ಅಸ್ಸೇ ಸೇರಿದಂತೆ ಒಟ್ಟು 53,07,067 ಮಾದರಿಗಳನ್ನು ಈ ವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಇದೇ ವೇಳೆ ಕೊರೋನಾ ಬಾಧಿಸಿ ಗುರುವಾರ ರಾಜ್ಯದಲ್ಲಿ 25 ಮಂದಿ ಸಾವಿಗೀಡಾದರು. ಹೊಸದಾಗಿ ರೋಗನಿರ್ಣಯ ಆದವರಲ್ಲಿ 140 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4683 ಜನರಿಗೆ ಸೋಂಕು ತಗಲಿದೆ. ಅಲ್ಲದೆ ಕೇರಳದಲ್ಲಿ 6119 ಜನರಿಗೆ ರೋಗಮುಕ್ತಿಯಾಗಿದೆ. ಈ ಮೂಲಕ ರೋಗ ಬಾಧಿತರಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಸಮಾಧಾನಕರ ವಿಷಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss