Wednesday, August 17, 2022

Latest Posts

ಕೇರಳದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ: ಜ.8ರಂದು ರಾಜ್ಯಕ್ಕೆ ಕೇಂದ್ರ ತಂಡ

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಕೋರೋನಾ ವ್ಯಾಪಕವಾಗಿ ಹರಡುತ್ತಿದ್ದು , ಇದು ರಾಜ್ಯದಾದ್ಯಂತ ಭಾರೀ ಆರೋಗ್ಯ ಸಮಸ್ಯೆ ಸೃಷ್ಟಿಸಿದೆ. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಕೇರಳದ ಸ್ಥಿತಿಗತಿಗಳ ಬಗ್ಗೆ ಅರಿತುಕೊಳ್ಳಲು ಕೇಂದ್ರ ತಂಡವು ಜ.8ರಂದು ರಾಜ್ಯಕ್ಕೆ ಅಗಮಿಸಲಿದೆ. ನ್ಯಾಶನಲ್ ಸೆಕ್ಟರ್ ಫೋರ್ ಡಿಸೀಸ್ ಕಂಟ್ರೋಲ್ ಇದರ ನಿರ್ದೇಶಕ ಡಾ.ಎಸ್.ಕೆ.ಸಿಂಗ್ ನೇತೃತ್ವದ ತಜ್ಞರು ಕೇರಳಕ್ಕ ಆಗಮಿಸಲಿದ್ದಾರೆ.
ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಸಾರ್ವಜನಿಕ ಆರೋಗ್ಯ ವಿಭಾಗದ ಕಾರ್ಯ ನಿರ್ವಹಣೆ, ಜಿಲ್ಲಾಮಟ್ಟದ ನಿಯಂತ್ರಣ, ಕೊರೋನಾ ಸೋಂಕು ಹರಡಲಿರುವ ಹಿನ್ನೆಲೆ, ರೋಗ ತಡೆಗಟ್ಟುವಲ್ಲಿ ಕೈಗೊಳ್ಳಲಾಗಿರುವ ನಿಯಂತ್ರಣ ಕ್ರಮಗಳ ಪ್ರಗತಿ ಮುಂತಾದ ವಿಷಯಗಳ ಬಗ್ಗೆ ಕೇಂದ್ರದ ತಜ್ಞರ ತಂಡವು ಪರಿಶೀಲಿಸಲಿದೆ.
ಕೇರಳದಲ್ಲಿ ಕೊರೋನಾ ವೈರಸ್ ಸೋಂಕು ಹರಡುವಿಕೆ ತೀವ್ರಗೊಳ್ಳುತ್ತಿದೆ ಎಂದೂ ಆ ಬಗ್ಗೆ ಕೇಂದ್ರ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಅವಲೋಕನ ನಡೆಸಬೇಕೆಂದೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರಕಾರವು ತಜ್ಞರ ತಂಡವನ್ನು ಕಳುಹಿಸುವ ವ್ಯವಸ್ಥೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!