Wednesday, August 17, 2022

Latest Posts

ಕೇರಳದಲ್ಲಿ ನಿಜವಾದ ವಿಪಕ್ಷ ಬಿಜೆಪಿ ಎಂದು ಒಪ್ಪಿಕೊಂಡ ಸಿಪಿಎಂ: ಕೆ.ಶ್ರೀಕಾಂತ್

ಕಾಸರಗೋಡು: ಕೇರಳದಲ್ಲಿ ಯಥಾರ್ಥ ವಿರೋಧಪಕ್ಷ ಬಿಜೆಪಿ ಎಂಬುದನ್ನು ಸಿಪಿಎಂ ಕೊನೆಗೂ ಒಪ್ಪಿಕೊಂಡಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ.
ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ರಾಜ್ಯ ವ್ಯಾಪಿ ನಡೆಸಿದ ನಿಂತು ಚಳವಳಿಯ ಜಿಲ್ಲಾಮಟ್ಟದ ಉದ್ಘಾಟನೆಯನ್ನು ಉದುಮ ಪಂಚಾಯತ್ ನ 13ನೇ ವಾರ್ಡ್ ನಲ್ಲಿ ನೆರವೇರಿಸಿ ಅವರು ಮಾತನಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಬೆಳಗ್ಗೆ ಮುಂದಿಡುವ ಆರೋಪಗಳನ್ನೇ ಮಧ್ಯಾಹ್ನ ವಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ ಹಾಗೂ ಐಕ್ಯರಂಗದ ನೇತಾರರು ಪುನರಾವರ್ತಿಸುತ್ತಿದ್ದಾರೆ ಎಂಬ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ರ ಹೇಳಿಕೆ ಯಥಾರ್ಥ ವಿಪಕ್ಷ ಯಾವುದು ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಕೆ.ಶ್ರೀಕಾಂತ್ ನುಡಿದರು.
ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಒಳಗೊಂಡ ಆರೋಪಿಗಳನ್ನು ಕೇರಳ ಸರಕಾರದ ಮಹತ್ತರ ಹುದ್ದೆಗಳಲ್ಲಿ ನೇಮಿಸಿರುವುದು ಮುಖ್ಯಮಂತ್ರಿಯ ಮಾಜಿ ಪ್ರಿನ್ಸಿಪಲ್ ಸೆಕ್ರೆಟರಿ ಎಂ.ಶಿವಶಂಕರ್ ಆಗಿದ್ದಾರೆ. ಆದ್ದರಿಂದ ಶಿವಶಂಕರ್ ನಡೆಸಿದ ಪ್ರತಿ ಚಟುವಟಿಕೆಯ ಹೊಣೆಗಾರಿಕೆಯಿಂದ ಪಿಣರಾಯಿ ವಿಜಯನ್ ರಿಗೆ ತಪ್ಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದರು.
ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಬಿಜು ಮೋಹನ್ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಎಸ್.ಸುಜಿತ್ ಸ್ವಾಗತಿಸಿ, ರತೀಶ್ ಮಾಳಿಗವಳಪ್ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!