Saturday, August 13, 2022

Latest Posts

ಕೇರಳದಲ್ಲಿ ಪಂಚಾಯತ್ ಚುನಾವಣೆ ಮುಂದೂಡುವ ಸಾಧ್ಯತೆ: ಆಯೋಗದ ಸಭೆ ಬಳಿಕ ಅಂತಿಮ ನಿರ್ಧಾರ

ತಿರುವನಂತಪುರ: ಕೇರಳದಲ್ಲಿ ಕೋವಿಡ್ ತೀವ್ರತೆಯ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ತಿರುವನಂತಪುರದ ವರದಿ ತಿಳಿಸಿದೆ. ವಿವಿಧ ಇಲಾಖೆಗಳೊಂದಿಗೆ ಸಮಾಲೋಚಿಸಿದ ಬಳಿಕ ಅಂತಿಮ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ ಪ್ರಸ್ತುತ ದೈನಂದಿನ ಕೊರೋನಾ ಪ್ರಕರಣಗಳ ಸಂಖ್ಯೆ ನಾಲ್ಕು ಸಾವಿರಕ್ಕೂ ಅಧಿಕವಾಗಿದೆ. ಕಳೆದ ಮೂರು – ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು , ಸಂಪರ್ಕದಿಂದ ಅತಿ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ.
ಆರೋಗ್ಯ ತಜ್ಞರು ಮತ್ತು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿದ ಬಳಿಕ ಚುನಾವಣಾ ದಿನಾಂಕವನ್ನು ನಿರ್ಧರಿಸುವ ಸಾಧ್ಯತೆಯಿದೆ. ಮತದಾನವನ್ನು ನವೆಂಬರ್ ಕೊನೆಯ ವಾರದಲ್ಲಿ ಅಥವಾ ಡಿಸೆಂಬರ್‍ ಮೊದಲ ವಾರದಲ್ಲಿ ನಿಗದಿಪಡಿಸುವ ಸಾಧ್ಯತೆ ಕಂಡುಬರುತ್ತಿದೆ. ಆದರೆ ಕೇರಳ ಚುನಾವಣಾ ಆಯೋಗವು ನಡೆಸುವ ಸರ್ವಪಕ್ಷ ಸಭೆಯ ಶಿಫಾರಸುಗಳನ್ನು ಪರಿಗಣಿಸಿ ಅನೌಪಚಾರಿಕ ಸಮಾಲೋಚನೆ ಮತ್ತು ಸರಕಾರದೊಂದಿಗೆ ಸಮಗ್ರ ಚರ್ಚೆ ನಡೆಸಿದ ನಂತರವಷ್ಟೇ ದಿನಾಂಕದ ಅಂತಿಮ ತೀರ್ಮಾನ ಕೈಕೊಳ್ಳಲಾಗುವುದು.
ಇದೇ ವೇಳೆ ಕೋವಿಡ್ ಸೋಂಕು ಮುಂದಿನ ದಿನಗಳಲ್ಲಿ ಐದು ಸಾವಿರವನ್ನು ದಾಟುವ ಸಾಧ್ಯತೆಯಿದ್ದು ಹಾಗಾದಲ್ಲಿ ಚುನಾವಣಾ ದಿನಾಂಕವನ್ನು ಮತ್ತೆ ಮುಂದೂಡಬಹುದು. ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಯಾವ ಗತಿಯಲ್ಲಿ ಸಾಗಲಿದೆ ಎಂಬುದು ಕೂಡ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss