Wednesday, June 29, 2022

Latest Posts

ಕೇರಳದಲ್ಲಿ ಬುಧವಾರ 10,606 ಮಂದಿಗೆ ಕೋವಿಡ್ ಸೋಂಕು: 6161 ಜನರಿಗೆ ರೋಗಮುಕ್ತಿ

ಕಾಸರಗೋಡು: ಕೇರಳ ರಾಜ್ಯದಲ್ಲಿ ಬುಧವಾರ 10,606 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಗೊಂಡಿದೆ. ರಾಜ್ಯದಲ್ಲಿ ಪ್ರಥಮವಾಗಿ ದಿನವೊಂದರಲ್ಲಿ 10 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ದೃಢಗೊಂಡಿರುವುದು ಪ್ರಥಮವಾಗಿದೆ. ಅಲ್ಲದೆ ಕೇರಳದಲ್ಲಿ 22 ಮಂದಿ ಸಾವಿಗೆ ಕೊರೋನಾ ವೈರಸ್ ಸೋಂಕು ಎಂಬುದಾಗಿ ದೃಢೀಕರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸತ್ತವರ ಸಂಖ್ಯೆ 906 ಕ್ಕೇರಿತು. ರೋಗ ಬಾಧಿತರಲ್ಲಿ 55 ಮಂದಿ ವಿದೇಶದಿಂದ ಹಾಗೂ 164 ಮಂದಿ ಇತರ ರಾಜ್ಯಗಳಿಂದ ಬಂದವರು. 9542 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 741 ಮಂದಿಯ ಸಂಪರ್ಕದ ಮೂಲ ಪತ್ತೆಯಾಗಿಲ್ಲ. 98 ಮಂದಿ ಆರೋಗ್ಯ ಕಾರ್ಯಕರ್ತರಿಗೆ, 6 ಮಂದಿ ಐಎನ್‍ಎಚ್‍ಎಸ್ ಸಿಬ್ಬಂದಿಗಳಿಗೆ ಸೋಂಕು ಬಾಧಿಸಿದೆ. 6161 ಮಂದಿ ಗುಣಮುಖರಾಗಿದ್ದಾರೆ.
ಕಲ್ಲಿಕೋಟೆ-1576, ಮಲಪ್ಪುರಂ-1350, ಎರ್ನಾಕುಳಂ-1201, ತಿರುವನಂತಪುರ-1182, ತೃಶ್ಶೂರು-948, ಕೊಲ್ಲಂ-852, ಆಲಪ್ಪುಳ-672, ಪಾಲಕ್ಕಾಡು-650, ಕಣ್ಣೂರು-602, ಕೋಟ್ಟಾಯಂ-490, ಕಾಸರಗೋಡು-432, ಪತ್ತನಂತ್ತಿಟ್ಟ-393, ವಯನಾಡು-138, ಇಡುಕ್ಕಿ-120 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-820, ಕೊಲ್ಲಂ-346, ಪತ್ತನಂತ್ತಿಟ್ಟ-222, ಆಲಪ್ಪುಳ-393, ಕೋಟ್ಟಾಯಂ-453, ಇಡುಕ್ಕಿ-89, ಎರ್ನಾಕುಳಂ-385, ತೃಶ್ಶೂರು-320, ಪಾಲಕ್ಕಾಡು-337, ಮಲಪ್ಪುರಂ-743, ಕಲ್ಲಿಕೋಟೆ-589, ವಯನಾಡು-103, ಕಣ್ಣೂರು-1188, ಕಾಸರಗೋಡು-177 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದೀಗ 92,161 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 1,60,253 ಮಂದಿ ಗುಣಮುಖರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss