Thursday, August 18, 2022

Latest Posts

ಕೇರಳದಲ್ಲಿ ಬುಧವಾರ 1195 ಮಂದಿಗೆ ಕೊರೋನಾ ವೈರಸ್ ಸೋಂಕು: 1234 ಜನರು ಗುಣಮುಖ

ಕಾಸರಗೋಡು: ಕೇರಳದಲ್ಲಿ ಬುಧವಾರ 1195 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಅಲ್ಲದೆ 1234 ಜನರು ಸೋಂಕು ಬಾಧಿತರು ರೋಗಮುಕ್ತರಾಗಿದ್ದಾರೆ. ರಾಜ್ಯದಲ್ಲಿ ಏಳು ಕೋವಿಡ್ ಸಾವುಗಳು ವರದಿಯಾಗಿವೆ. 13 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಹೊಸದಾಗಿ ಕೋವಿಡ್ ಬಾಧಿಸಿದೆ. ಇದೇ ವೇಳೆ ರೋಗ ನಿರ್ಣಯ ಆದವರಲ್ಲಿ 125 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 971 ಜನರಿಗೆ ಸೋಂಕು ತಗಲಿದೆ. ಅವರಲ್ಲಿ 79 ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ರಾಜ್ಯದ ರಾಜಧಾನಿ ತಿರುವನಂತಪುರದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಅದರಂತೆ ರಾಜಧಾನಿಯಲ್ಲಿ ಒಟ್ಟು 274 ಜನರಲ್ಲಿ ಕೋವಿಡ್ ಪತ್ತೆಯಾಗಿದೆ. ಇತರ ಜಿಲ್ಲೆಗಳೆಂದರೆ ಎರ್ನಾಕುಳಂ 120, ಆಲಪ್ಪುಳ 108, ತೃಶೂರು 86, ಮಲಪ್ಪುರಂ 167, ಕಾಸರಗೋಡು 128, ಪಾಲಕ್ಕಾಡು 41, ಕೊಲ್ಲಂ 30, ಕಣ್ಣೂರು 61, ಪತ್ತನಂತಿಟ್ಟ 37, ಕೋಟ್ಟಾಯಂ 51, ಕಲ್ಲಿಕೋಟೆ 39, ಇಡುಕ್ಕಿ 39 ಮತ್ತು ವಯನಾಡು ಜಿಲ್ಲೆಯಲ್ಲಿ 14 ಮಂದಿ ಸೋಂಕಿತರನ್ನು ಗುರುತಿಸಲಾಗಿದೆ.
ಕೇರಳದಲ್ಲಿ ಬುಧವಾರ ಒಟ್ಟು 1234 ಮಂದಿ ರೋಗಮುಕ್ತರಾದರು. ತಿರುವನಂತಪುರ-528, ಕೊಲ್ಲಂ-49, ಪತ್ತನಂತಿಟ್ಟ-46, ಆಲಪ್ಪುಳ-60, ಕೋಟ್ಟಾಯಂ-47, ಇಡುಕ್ಕಿ-58, ಎರ್ನಾಕುಳಂ-35, ತೃಶೂರು-51, ಪಾಲಕ್ಕಾಡು-13, ಮಲಪ್ಪುರಂ-77, ಕಲ್ಲಿಕೋಟೆ-72, ವಯನಾಡು-40, ಕಣ್ಣೂರು-53 ಹಾಗೂ ಕಾಸರಗೋಡು ಜಿಲ್ಲೆಯಲ್ಲಿ 105 ಮಂದಿ ರೋಗ ಮುಕ್ತರಾದರು.
ತಿರುವನಂತಪುರದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕಾರ್ಯಾಚರಣೆ ಅಂಗವಾಗಿ ನಗರ ಪೊಲೀಸ್ ಆಯುಕ್ತ ಬಲರಾಮ್ ಕುಮಾರ್ ಉಪಾಧ್ಯಾಯ ಅವರು ಪೊಲೀಸರಿಗೆ ಎರಡು ವಾರಗಳ ಗಡುವನ್ನು ನಿಗದಿಪಡಿಸಿದ್ದಾರೆ. ಎರಡು ವಾರಗಳ ವರೆಗೆ ಸಂಪರ್ಕದ ಮೂಲಕ ರೋಗ ಹರಡದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಇದಕ್ಕಾಗಿ ಯಾವುದೇ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಪೂರ್ಣ ಪೊಲೀಸ್ ಪಡೆ ಸನ್ನದ್ಧವಾಗಿರಲು ಆದೇಶಿಸಲಾಗಿದೆ. ಯಾವುದೇ ಸಮಯದಲ್ಲಿ ಕರೆ ಮಾಡಿದರೆ ಎಲ್ಲರೂ ಕರ್ತವ್ಯಕ್ಕೆ ಸಿದ್ಧರಾಗಿರಬೇಕು ಎಂದು ಸೂಚಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಿಯಂತ್ರಣ ಕ್ರಮಗಳು ಸಮರೋಪಾದಿಯಲ್ಲಿವೆ. ಇದೇ ವೇಳೆ ಆರೋಗ್ಯ ಕಾರ್ಯಕರ್ತರಿಗೂ ಕೊರೋನಾ ದೃಢಗೊಳ್ಳುತ್ತಿದೆ. ತಡೆಗಟ್ಟುವ ಕ್ರಮಗಳಿಗೆ ಇದು ಮಾರಕವಾಗಿ ಪರಿಣಮಿಸಿದೆ. ಅಲ್ಲದೆ ಪೊಲೀಸ್ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ರೋಗ ಹೆಚ್ಚುತ್ತಿರುವುದು ಮತ್ತಷ್ಟು ಭೀತಿಗೆ ಕಾರಣವಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ
ಆಸ್ಪತ್ರೆಗಳಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವ ಹಾಗೂ ಕ್ವಾರಂಟೈನ್ ನಲ್ಲಿರುವವರ ಸಂಖ್ಯೆಯೂ ಹೆಚ್ಚಿದೆ. ಹಾಟ್‍ ಸ್ಪಾಟ್‍ಗಳು ಮತ್ತು ಕಂಟೈನ್ ಮೆಂಟ್ ವಲಯಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!