ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 270 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 141 ಮಂದಿ ಗುಣಮುಖರಾಗಿದ್ದಾರೆ. 242 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆಯೆಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 6214 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. ಮನೆಗಳಲ್ಲಿ 4937 ಮಂದಿ, ಸಾಂಸ್ಥಿಕವಾಗಿ 1347 ಮಂದಿ ನಿಗಾದಲ್ಲಿರುವರು. 245 ಮಂದಿ ನೂತನವಾಗಿ ನಿಗಾ ಪ್ರವೇಶಿಸಿದ್ದಾರೆ. 540 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1059 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 430 ಮಂದಿತ ಫಲಿತಾಂಶ ಲಭಿಸಲು ಬಾಕಿಯಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 6678 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 5609 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 617 ಮಂದಿ ವಿದೇಶದಿಂದ, 452 ಮಂದಿ ಇತರ ರಾಜ್ಯಗಳಿಂದ ಬಂದವರು. 4642 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 46 ಮಂದಿ ಕೋವಿಡ್ ಬಾಧಿಸಿ ಸಾವಿಗೀಡಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 144 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ವಿವರಣೆ ನೀಡಿದ್ದಾರೆ.
ಕೇರಳದಲ್ಲಿ ಬುಧವಾರ 3402 ಮಂದಿಗೆ ಕೊರೋನಾ ವೈರಸ್ ತಗಲಿದೆ. ಇದರಲ್ಲಿ 3120 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ 2058 ಮಂದಿ ಗುಣಮುಖರಾಗಿದ್ದಾರೆ.
ತಿರುವನಂತಪುರ ಜಿಲ್ಲೆಯಲ್ಲಿ 531, ಕೊಲ್ಲಂ 362, ಕಲ್ಲಿಕೋಟೆ 330, ತೃಶೂರು 323, ಎರ್ನಾಕುಳಂ 276, ಕಾಸರಗೋಡು ಜಿಲ್ಲೆಯಲ್ಲಿ 270, ಕಣ್ಣೂರು 251, ಆಲಪ್ಪುಳ 240, ಮಲಪ್ಪುರಂ 201, ಕೋಟ್ಟಾಯಂ 196, ಪತ್ತನಂತ್ತಿಟ್ಟ 190, ಪಾಲಕ್ಕಾಡು 131, ವಯನಾಡು 77, ಇಡುಕ್ಕಿ 24 ಜನರಿಗೆ ಕೊರೋನಾ ಸೋಂಕು ದೃಢೀಕರಿಸಲಾಗಿದೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯ ನಾಲ್ಕು ಮಂದಿ ಸೇರಿದಂತೆ ರಾಜ್ಯದಲ್ಲಿ 12 ಮಂದಿ ಕೋವಿಡ್ ವೈರಸ್ ತಗಲಿ ಬುಧವಾರ ಸಾವಿಗೀಡಾದರು.