Monday, August 8, 2022

Latest Posts

ಕೇರಳದಲ್ಲಿ ಬುಧವಾರ 3830 ಮಂದಿಗೆ ಕೊರೋನಾ ಸೋಂಕು: 2263 ಜನರಿಗೆ ರೋಗಮುಕ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 119 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಗೊಂಡಿದೆ. ಈ ಪೈಕಿ 113 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಐವರು ವಿದೇಶದಿಂದ ಹಾಗೂ ಒಬ್ಬರು ಇತರ ರಾಜ್ಯದಿಂದ ಬಂದವರು. ಇದೇ ಸಂದರ್ಭದಲ್ಲಿ 83 ಮಂದಿ ಗುಣಮುಖರಾಗಿದ್ದಾರೆ.
ಅಜಾನೂರು-15, ಪಳ್ಳಿಕೆರೆ-6, ಪುಲ್ಲೂರು-1, ಮಡಿಕೈ-11, ಪಡನ್ನ-3, ಬೆಳ್ಳೂರು-1, ಮುಳಿಯಾರು-3, ಚೆಂಗಳ-12, ಈಸ್ಟ್ ಎಳೇರಿ-4, ಚೆರ್ವತ್ತೂರು-5, ಪಿಲಿಕ್ಕೋಡು-1, ಮೊಗ್ರಾಲ್ ಪುತ್ತೂರು-1, ಕಾಸರಗೋಡು-3, ವರ್ಕಾಡಿ-2, ಮಧೂರು-3, ಚೆಮ್ನಾಡು-7, ಉದುಮ-4, ಕಾಞಂಗಾಡು-9, ನೀಲೇಶ್ವರ-1, ತೃಕ್ಕರೀಪುರ-4, ಕಿನಾನೂರು-4, ಮಂಜೇಶ್ವರ-2, ಮಂಗಲ್ಪಾಡಿ-6, ಬಳಾಲ್-2, ಮೀಂಜ-1, ಪೈವಳಿಕೆ-2, ಕುಂಬಳೆ-2, ಬೇಡಡ್ಕ-1, ದೇಲಂಪಾಡಿ-1, ಕಾರಡ್ಕ-1, ಕರುನಾಗಪಳ್ಳಿ-1 ಎಂಬಂತೆ ರೋಗ ಬಾಧಿಸಿದೆ.
ಕೇರಳದಲ್ಲಿ ಬುಧವಾರ 3830 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಅಲ್ಲದೆ ರಾಜ್ಯದಲ್ಲಿ ಬುಧವಾರ 14 ಮಂದಿ ಸಾವಿಗೆ ಕೋವಿಡ್ ಕಾರಣವೆಂಬುದಾಗಿ ಖಾತರಿಯಾಗಿದೆ. ಕೇರಳದಲ್ಲಿ ಕೊರೋನಾ ಬಾಧಿಸಿ ಈ ವರೆಗೆ ಒಟ್ಟು 480 ಮಂದಿ ಸಾವಿಗೀಡಾಗಿದ್ದಾರೆ.
ಇದೇ ವೇಳೆ ರೋಗ ಬಾಧಿತರಲ್ಲಿ 49 ಮಂದಿ ವಿದೇಶದಿಂದ, 153 ಮಂದಿ ಇತರ ರಾಜ್ಯಗಳಿಂದ ಬಂದವರು. 3562 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 66 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ತಗಲಿದೆ. 2263 ಮಂದಿ ಗುಣಮುಖರಾಗಿದ್ದಾರೆ.
ತಿರುವನಂತಪುರ-675, ಕಲ್ಲಿಕೋಟೆ-468, ಆಲಪ್ಪುಳ-323, ಎರ್ನಾಕುಳಂ-319, ಕೊಲ್ಲಂ-300, ಮಲಪ್ಪುರಂ-298, ತೃಶ್ಶೂರು-263, ಕಣ್ಣೂರು-247, ಪತ್ತನಂತ್ತಿಟ್ಟ-236, ಪಾಲಕ್ಕಾಡು-220, ಕೋಟ್ಟಾಯಂ-187, ಕಾಸರಗೋಡು-119, ವಯನಾಡು-99, ಇಡುಕ್ಕಿ-76 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-418, ಕೊಲ್ಲಂ-26, ಪತ್ತನಂತ್ತಿಟ್ಟ-157, ಆಲಪ್ಪುಳ-120, ಕೋಟ್ಟಾಯಂ-131, ಇಡುಕ್ಕಿ-21, ಎರ್ನಾಕುಳಂ-371, ತೃಶ್ಶೂರು-220, ಪಾಲಕ್ಕಾಡು-117, ಮಲಪ್ಪುರಂ-257, ಕಲ್ಲಿಕೋಟೆ-155, ವಯನಾಡು-12, ಕಣ್ಣೂರು-179, ಕಾಸರಗೋಡು-83 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಾಗಿ 32,709 ಮಂದಿ ಚಿಕಿತ್ಸೆ ಪಡೆಯುತಿದ್ದಾರೆ. ಈಗಾಗಲೇ 84,608 ಮಂದಿ ಗುಣಮುಖರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss