ಕಾಸರಗೋಡು: ಕಳೆದ ಕೆಲವು ದಿನಗಳಿಂದ ಕುಸಿತ ಕಂಡಿದ್ದ ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ ಕಂಡಿದೆ. ಅದರಂತೆ ಕೇರಳದಲ್ಲಿ ಬುಧವಾರ 8516 ಜನರಿಗೆ ಕೊರೋನಾ ದೃಢಪಡಿಸಲಾಗಿದೆ. ಅಲ್ಲದೆ ರಾಜ್ಯದಲ್ಲಿ 8206 ಜನರ ಫಲಿತಾಂಶ ನೆಗೆಟಿವ್ ಆಗಿದೆ. ಸಂಪರ್ಕದ ಮೂಲಕ 7473 ಜನರಿಗೆ ಸೋಂಕು ತಗಲಿದೆ. 879 ಮಂದಿ ಸೋಂಕಿತರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ರೋಗ ಪತ್ತೆಯಾದವರಲ್ಲಿ 97 ಮಂದಿ ಹೊರ ರಾಜ್ಯದಿಂದ ಬಂದವರು. 67 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,02,063 ಜನರು ಕಣ್ಗಾವಲಿನಲ್ಲಿದ್ದಾರೆ. ರಾಜ್ಯದಲ್ಲಿ 638 ಹಾಟ್ ಸ್ಪಾಟ್ಗಳಿವೆ.
ಎರ್ನಾಕುಳಂ 1197, ತೃಶೂರು
1114, ಕಲ್ಲಿಕೋಟೆ 951, ಕೊಲ್ಲಂ 937, ಮಲಪ್ಪುರಂ 784, ಆಲಪ್ಪುಳ 765, ತಿರುವನಂತಪುರ 651, ಕೋಟ್ಟಾಯಂ 571, ಪಾಲಕ್ಕಾಡು 453, ಕಣ್ಣೂರು 370, ಇಡಕ್ಕಿ 204, ಪತ್ತನಂತ್ತಿಟ್ಟ 186, ಕಾಸರಗೋಡು 182, ವಯನಾಡು 151 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಚಿಕಿತ್ಸೆಗೆ ಒಳಪಟ್ಟ 8206 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 881, ಕೊಲ್ಲಂ 769, ಪತ್ತನಂತ್ತಿಟ್ಟ 286, ಆಲಪ್ಪುಳ 672, ಕೋಟ್ಟಾಯಂ 470, ಇಡುಕ್ಕಿ 90, ಎರ್ನಾಕುಳಂ 1078, ತೃಶೂರು 936, ಪಾಲಕ್ಕಾಡು 583, ಮಲಪ್ಪುರಂ 655, ಕಲ್ಲಿಕೋಟೆ 1015, ವಯನಾಡು 87, ಕಣ್ಣೂರು 515, ಕಾಸರಗೋಡು 169 ಎಂಬಂತೆ ಸೋಂಕಿನಿಂತ ಮುಕ್ತರಾದರು. ರಾಜ್ಯದಲ್ಲಿ ಬುಧವಾರ 28 ಮಂದಿ ಕೋವಿಡ್ ತಗಲಿ ಮೃತಪಟ್ಟರು. ಅದರಲ್ಲಿ ಒಬ್ಬರು ಕಾಸರಗೋಡು ಜಿಲ್ಲೆಯವರು. ಈ ಮೂಲಕ ಕೇರಳದಲ್ಲಿ ಕೊರೋನಾ ಸೋಂಕು ಬಾಧಿಸಿ ಇದುವರೆಗೆ ಒಟ್ಟು1587 ಮಂದಿ ಸಾವಿಗೀಡಾದರು.