Tuesday, August 16, 2022

Latest Posts

ಕೇರಳದಲ್ಲಿ ಬುಧವಾರ 8830 ಮಂದಿಗೆ ಕೊರೋನಾ ದೃಢ: 3536 ಜನರಿಗೆ ರೋಗಮುಕ್ತಿ

ಕಾಸರಗೋಡು:  ಕೇರಳದಲ್ಲಿ ಬುಧವಾರ 8830 ಜನರಿಗೆ ಕೋವಿಡ್ ಖಚಿತವಾಗಿದೆ. 3536 ಮಂದಿ ಸೋಂಕಿನಿಂದ ಗುಣಮುಖರಾದರು. ಸಂಪರ್ಕದ ಮೂಲಕ 7695 ಜನರಿಗೆ ಸೋಂಕು ತಗಲಿತು. 784 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕಾಸರಗೋಡು ಜಿಲ್ಲೆಯ ಒಬ್ಬರು ಸೇರಿದಂತೆ ಬುಧವಾರ ಕೇರಳದಲ್ಲಿ 23 ಮಂದಿ ಕೊರೋನಾ ಬಾಧಿಸಿ ಸಾವಿಗೀಡಾದರು. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೋವಿಡ್ ಸಾವಿನ ಸಂಖ್ಯೆ 742 ಕ್ಕೆ ಏರಿದೆ.
ಎರ್ನಾಕುಳಂ 1056, ತಿರುವನಂತಪುರ 986, ಮಲಪ್ಪುರಂ 977, ಕಲ್ಲಿಕೋಟೆ 942, ಕೊಲ್ಲಂ 812, ತೃಶೂರು 808, ಆಲಪ್ಪುಳ 679, ಪಾಲಕ್ಕಾಡು 631, ಕಣ್ಣೂರು 519, ಕೋಟ್ಟಾಯಂ 442, ಕಾಸರಗೋಡು 321, ಪತ್ತನಂತ್ತಿಟ್ಟ 286, ವಯನಾಡು 214, ಇಡುಕ್ಕಿ 157 ಎಂಬಂತೆ ಸೋಂಕು ಬಾಧಿಸಿದೆ.
ಚಿಕಿತ್ಸೆಗೆ ಒಳಗಾಗಿರುವ 3536 ರೋಗಿಗಳ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 379, ಕೊಲ್ಲಂ 295, ಪತ್ತನಂತ್ತಿಟ್ಟ 204, ಆಲಪ್ಪುಳ 302, ಕೋಟ್ಟಾಯಂ 128, ಇಡುಕ್ಕಿ 21, ಎರ್ನಾಕುಳಂ 263, ತೃಶೂರು 155, ಪಾಲಕ್ಕಾಡು 206, ಮಲಪ್ಪುರಂ 601, ಕಲ್ಲಿಕೋಟೆ 589, ವಯನಾಡು 51, ಕಣ್ಣೂರು 182, ಕಾಸರಗೋಡು 163 ಎಂಬಂತೆ ಸೋಂಕಿನಿಂದ ಗುಣಮುಖರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss