Wednesday, August 10, 2022

Latest Posts

ಕೇರಳದಲ್ಲಿ ಭಾನುವಾರ ಜಾರಿಗೊಳಿಸಲಾಗಿದ್ದ ಸಂಪೂರ್ಣ ಲಾಕ್ ಡೌನ್ ಜೂ.21ರಂದು ರದ್ದು

ಕಾಸರಗೋಡು: ಕೇರಳದಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಭಾನುವಾರ ಜಾರಿಗೊಳಿಸಲಾಗಿದ್ದ ಸಂಪೂರ್ಣ ಲಾಕ್ ಡೌನ್ ವ್ಯವಸ್ಥೆಯು ಜೂನ್ 21ರಂದು ಇರುವುದಿಲ್ಲ ಎಂದು ರಾಜ್ಯ ಸರಕಾರ ಹೇಳಿಕೆ ನೀಡಿದೆ.
ಉಳಿದ ದಿನಗಳಂತೆ ಈ ಭಾನುವಾರದಂದು ಸಾಮಾನ್ಯ ನಿರ್ಬಂಧ ಇರುತ್ತದೆ. ಇದೇ ವೇಳೆ ಜೂನ್ 21 ರಂದು ವಿವಿಧ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಪಾಲ್ಗೊಳ್ಳಲು ತೆರಳಬೇಕಾಗಿರುವುದರಿಂದ ಈ ಭಾನುವಾರದ ಲಾಕ್ ಡೌನ್ ಗೆ ವಿನಾಯಿತಿ ನೀಡಲಾಗಿದೆ ಎಂದು ಸರಕಾರ ಹೇಳಿದೆ. ಆದರೆ ಈ ವಿನಾಯಿತಿ ಜೂನ್ 21ರ ಭಾನುವಾರಕ್ಕೆ ಮಾತ್ರ ಸೀಮಿತವಾಗಿದ್ದು ಮುಂದಿನ ಭಾನುವಾರಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss