Sunday, August 14, 2022

Latest Posts

ಕೇರಳದಲ್ಲಿ ಭಾನುವಾರ 1169 ಮಂದಿಗೆ ಕೊರೋನಾ ಸೋಂಕು ದೃಢ, 688 ಜನರಿಗೆ ರೋಗಮುಕ್ತ

ಕಾಸರಗೋಡು: ತೀವ್ರ ಕಟ್ಟೆಚ್ಚರ, ನಿಯಂತ್ರಣ ನಿರ್ವಹಣೆಯ ಹೊರತಾಗಿಯೂ ಮಹಾಮಾರಿ ಕೋವಿಡ್ ರಾಜ್ಯ ವ್ಯಾಪಕವಾಗಿ ಹರಡುತ್ತಿದ್ದು , ಭಾನುವಾರ ಒಂದೇ ದಿನ ಕೇರಳದಾದ್ಯಂತ 1169 ಮಂದಿ ಸೋಂಕಿತರನ್ನು ಪತ್ತೆಹಚ್ಚಲಾಗಿದೆ.
ತಿರುವನಂತಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಧಿತರನ್ನು ಗುರುತಿಸಲಾಗಿದ್ದು , ಈ ಜಿಲ್ಲೆಯಲ್ಲಿ 377 ಜನರು ಸೋಂಕಿಗೆ ಒಳಗಾಗಿದ್ದಾರೆ. ಎರ್ನಾಕುಳಂ ಜಿಲ್ಲೆಯಲ್ಲಿ 128, ಮಲಪ್ಪುರಂ 126, ಕಾಸರಗೋಡು 113, ಕೋಟ್ಟಾಯಂ 70, ಕೊಲ್ಲಂ 69, ತೃಶೂರು 58, ಕೊಝಿಕ್ಕೋಡು 50, ಇಡುಕ್ಕಿ 42, ಆಲಪ್ಪುಳ 38, ಪಾಲಕ್ಕಾಡು 38, ಪತ್ತನಂತಿಟ್ಟ 25, ವಯನಾಡು 19, ಕಣ್ಣೂರು ಜಿಲ್ಲೆಯಲ್ಲಿ 16 ಮಂದಿ ಹೊಸ ಸೋಂಕಿತರನ್ನು ಪತ್ತೆಹಚ್ಚಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೇಸ್‍ ಬುಕ್ ಪೋಸ್ಟ್ ನಲ್ಲಿ ಈ ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ಪತ್ತೆಯಾದ ಹೊಸ ಸೋಂಕಿತರ ಪೈಕಿ 991 ಮಂದಿ ಸಂಪರ್ಕದ ಮೂಲಕ ರೋಗಕ್ಕೆ ತುತ್ತಾಗಿದ್ದಾರೆ. ಅವರಲ್ಲಿ 56 ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ ಜಿಲ್ಲೆಯಲ್ಲಿ 363, ಮಲಪ್ಪುರಂ 113, ಕಾಸರಗೋಡು 110, ಎರ್ನಾಕುಳಂ 79, ಕೋಟ್ಟಾಯಂ 70, ಕೊಲ್ಲಂ 51, ತೃಶೂರು 40, ಕೋಝಿಕ್ಕೋಡು 39, ಪಾಲಕ್ಕಾಡು 36, ಆಲಪ್ಪುಳ 24, ಇಡುಕ್ಕಿ 23, ಪತ್ತನಂತಿಟ್ಟ 18, ವಯನಾಡು 18 ಹಾಗೂ ಕಣ್ಣೂರು ಜಿಲ್ಲೆಯಲ್ಲಿ 7 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ರಾಜ್ಯದಲ್ಲಿ ಹೊಸದಾಗಿ ಒಟ್ಟು 29 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಈ ರೋಗ ಪತ್ತೆಯಾಗಿದೆ. ತಿರುವನಂತಪುರ ಜಿಲ್ಲೆಯ 11 ಜನ ಆರೋಗ್ಯ ಕಾರ್ಯಕರ್ತರು, ಎರ್ನಾಕುಳಂ 7, ಕಣ್ಣೂರು 5, ಮಲಪ್ಪುರಂ 4, ಪತ್ತನಂತಿಟ್ಟ ಮತ್ತು ವಯನಾಡು ಜಿಲ್ಲೆಗಳಲ್ಲಿ ತಲಾ ಒಬ್ಬರು ಸೋಂಕಿಗೊಳಗಾಗಿದ್ದಾರೆ. ತೃಶೂರು ಜಿಲ್ಲೆಯ 10 ಕೆಎಸ್‍ಇ ಉದ್ಯೋಗಿಗಳಿಗೆ, ಓರ್ವ ಕೆಎಲ್‍ಎಫ್ ನೌಕರನಿಗೆ ಸೋಂಕು ದೃಢಗೊಂಡಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 688 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಕೊಲ್ಲಂ ಜಿಲ್ಲೆಯ 168 ಜನರು, ಕೋಝಿಕ್ಕೋಡು 93, ತಿರುವನಂತಪುರ 66, ತೃಶೂರು 63, ಕಣ್ಣೂರು 55, ಮಲಪ್ಪುರಂ 44, ಕೋಟ್ಟಾಯಂ 39, ಎರ್ನಾಕುಳಂ 37, ಇಡುಕ್ಕಿ ಹಾಗೂ ಕಾಸರಗೋಡು ಜಿಲ್ಲೆಗಳ 30 ಮಂದಿ ಗುಣಮುಖರಾಗಿದ್ದಾರೆ. ಇದೀಗ ರಾಜ್ಯದಲ್ಲಿ 11,342 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 14,467 ಮಂದಿ ಕೋವಿಡ್ ಮುಕ್ತರಾಗಿರುವರು. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 22,028 ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss