Wednesday, June 29, 2022

Latest Posts

ಕೇರಳದಲ್ಲಿ ಭಾನುವಾರ 1530 ಮಂದಿಗೆ ಕೊರೋನಾ ವೈರಸ್ ಸೋಂಕು: 1099 ಜನರಿಗೆ ರೋಗಮುಕ್ತಿ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 48 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 37 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. ಇವರಲ್ಲಿ ಇಬ್ಬರ ಸಂಪರ್ಕ ಮೂಲ ಪತ್ತೆಯಾಗಿಲ್ಲ. 4 ಮಂದಿ ವಿದೇಶದಿಂದ, 6 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ 203 ಮಂದಿ ಗುಣಮುಖರಾಗಿದ್ದಾರೆ.
ಕಾಸರಗೋಡು ನಗರಸಭೆ 4, ಮಧೂರು ಪಂಚಾಯತ್ 1, ಕುಂಬಳೆ ಪಂಚಾಯತ್ 2, ಚೆಂಗಳ ಪಂಚಾಯತ್ 1, ಚೆಮ್ನಾಡು ಪಂಚಾಯತ್ 5, ಮಂಗಲ್ಪಾಡಿ ಪಂಚಾಯತ್ 2, ಪೈವಳಿಕೆ ಪಂಚಾಯತ್ 1, ಎಣ್ಮಕಜೆ ಪಂಚಾಯತ್ 1, ಪಳ್ಳಿಕೆರೆ ಪಂಚಾಯತ್ 8, ಕಾಞಂಗಾಡು ನಗರಸಭೆ 12, ಮಡಿಕೈ ಪಂಚಾಯತ್ 1, ಅಜಾನೂರು ಪಂಚಾಯತ್ 1, ಕಿನಾನೂರು ಕರಿಂದಳಂ ಪಂಚಾಯತ್ 1, ಪನತ್ತಡಿ ಪಂಚಾಯತ್ 2, ಚೆರುವತ್ತೂರು ಪಂಚಾಯತ್ 2, ತೃಕ್ಕರಿಪುರ ಪಂಚಾಯತ್ 2, ಕಯ್ಯೂರು ಚೀಮೇನಿ ಪಂಚಾಯತ್ 1, ಕಳ್ಳಾರು ಪಂಚಾಯತ್ 1 ಮಂದಿಗೆ ಸೋಂಕು ಖಚಿತವಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ 5068 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. ಮನೆಗಳಲ್ಲಿ 3741 ಮಂದಿ, ಸಾಂಸ್ಥಿಕವಾಗಿ 327 ಮಂದಿ ನಿಗಾದಲ್ಲಿರುವರು. ನೂತನವಾಗಿ 395 ಮಂದಿ ನಿಗಾ ಪ್ರವೇಶಿಸಿದ್ದಾರೆ. ಹೊಸದಾಗಿ 974 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 686 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಈ ಮಧ್ಯೆ ಸಂಪರ್ಕದ ಮೂಲಕ ಕೊರೋನಾ ಸೋಂಕು ಬಾಧಿಸಿದ ಕಾಸರಗೋಡು ನಗರಸಭಾ ವ್ಯಾಪ್ತಿಯ 71 ವರ್ಷ ಪ್ರಾಯದ ವೃದ್ಧ ಸಾವಿಗೀಡಾದರು. ಅಲ್ಲದೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಏಳು ತಿಂಗಳ ಮಗು ಕೋವಿಡ್ ತಗಲಿ ಸಾವಿಗೀಡಾಯಿತು.
ಕೇರಳದಲ್ಲಿ ಭಾನುವಾರ ಒಟ್ಟು 1530 ಮಂದಿ ಕೊರೋನಾ ಸೋಂಕಿತರನ್ನು ಗುರುತಿಸಲಾಗಿದೆ. ಇದರಲ್ಲಿ ಸಂಪರ್ಕದ ಮೂಲಕ ಬಹುಪಾಲು ಜನರಿಗೆ ರೋಗ ಹರಡಿರುವುದು ಕಳವಳಕಾರಿಯಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೇಸ್‍ ಬುಕ್ ಪೋಸ್ಟ್ ನಲ್ಲಿ ಕೋವಿಡ್ ಬಾಧಿತರ ವಿವರಗಳನ್ನು ನೀಡಿದ್ದು , 1099 ಮಂದಿ ಬಾಧಿತರು ರೋಗಮುಕ್ತರಾದರು.
ರೋಗನಿರ್ಣಯ ಆದವರಲ್ಲಿ 37 ಮಂದಿ ವಿದೇಶಗಳಿಂದ ಮತ್ತು 89 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 1351 ಜನರಿಗೆ ಸೋಂಕು ತಗಲಿದ್ದು , ಈ ಪೈಕಿ 100 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.
ತಿರುವನಂತಪುರ 519, ಮಲಪ್ಪುರಂ 221, ಎರ್ನಾಕುಳಂ 123, ಕೋಝಿಕ್ಕೋಡು 118, ಕೋಟ್ಟಾಯಂ 100, ಆಲಪ್ಪುಳ 86, ಕೊಲ್ಲಂ 81, ಕಣ್ಣೂರು 52, ವಯನಾಡು 49, ಕಾಸರಗೋಡು 48, ಪತ್ತನಂತಿಟ್ಟ 44, ಇಡುಕ್ಕಿ ಮತ್ತು ತೃಶೂರು ತಲಾ 30 ಮತ್ತು ಪಾಲಕ್ಕಾಡು 29 ಪ್ರಕರಣಗಳು ವರದಿಯಾಗಿವೆ.
ಸಂಪರ್ಕದ ಮೂಲಕ 1351 ಜನರಿಗೆ ಸೋಂಕು ತಗಲಿದೆ. ಅವುಗಳಲ್ಲಿ 100 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 487, ಮಲಪ್ಪುರಂ 200, ಎರ್ನಾಕುಳಂ 110 , ಕೋಝಿಕ್ಕೋಡು 106, ಕೋಟ್ಟಾಯಂ 91, ಆಲಪ್ಪುಳ 73 , ಕೊಲ್ಲಂ 70, ಕಣ್ಣೂರು 38, ಕಾಸರಗೋಡು 37, ವಯನಾಡು 36, ತೃಶೂರು 27, ಪಾಲಕ್ಕಾಡು 24 ಮತ್ತು ಇಡುಕ್ಕಿ ಜಿಲ್ಲೆಯಲ್ಲಿ 19 ಜನರು ಸಂಪರ್ಕದಿಂದ ಸೋಂಕಿಗೊಳಗಾದರು.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1099 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಕಾಸರಗೋಡು 203, ತಿರುವನಂತಪುರ 190, ಎರ್ನಾಕುಳಂ 120, ಪಾಲಕ್ಕಾಡು 107, ಮಲಪ್ಪುರಂ 82, ತೃಶೂರು 64, ಕೋಟ್ಟಾಯಂ ಮತ್ತು ವಯನಾಡು ತಲಾ 61, ಕೊಲ್ಲಂ 55, ಕೋಝಿಕ್ಕೋಡು 43, ಇಡುಕ್ಕಿ 39, ಆಲಪ್ಪುಳ 30, ಪತ್ತನಂತಿಟ್ಟ 24, ಕಣ್ಣೂರು 20 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಇದಲ್ಲದೆ 15,310 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈ ವರೆಗೆ 28,878 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss