Saturday, August 13, 2022

Latest Posts

ಕೇರಳದಲ್ಲಿ ಭಾನುವಾರ 1908 ಮಂದಿಗೆ ಕೋವಿಡ್ ಸೋಂಕು: 1110 ಜನರಿಗೆ ರೋಗಮುಕ್ತಿ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 85 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದರಲ್ಲಿ 83 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಒಬ್ಬರು ವಿದೇಶದಿಂದ, ಒಬ್ಬರು ಇತರ ರಾಜ್ಯದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಇದೇ ವೇಳೆ ಭಾನುವಾರ 44 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ನಗರಸಭೆ 3, ಮಂಗಲ್ಪಾಡಿ ಪಂಚಾಯತ್ 7, ಚೆಮ್ನಾಡು ಪಂಚಾಯತ್ 17, ಚೆಂಗಳ ಪಂಚಾಯತ್ 1, ಮೊಗ್ರಾಲ್ ಪಂಚಾಯತ್ 2, ಬದಿಯಡ್ಕ ಪಂಚಾಯತ್ 1, ಮೀಂಜ ಪಂಚಾಯತ್ 2, ಕಾಞಂಗಾಡು ನಗರಸಭೆ 24, ಅಜಾನೂರು ಪಂಚಾಯತ್ 6, ಉದುಮ ಪಂಚಾಯತ್ 2, ಪಳ್ಳಿಕೆರೆ ಪಂಚಾಯತ್ 5, ಮಡಿಕೈ ಪಂಚಾಯತ್ 1, ನೀಲೇಶ್ವರ ನಗರಸಭೆ 1, ವಲಿಯಪರಂಬ ಪಂಚಾಯತ್ 10, ಚೆರುವತ್ತೂರು ಪಂಚಾಯತ್ 1, ಕೋಡೋಂ ಬೇಳೂರು ಪಂಚಾಯತ್ 1, ವೆಸ್ಟ್ ಎಳೇರಿ ಪಂಚಾಯತ್ 1 ಮಂದಿಗೆ ಕೋವಿಡ್ ಸೋಂಕು ಬಾಧಿಸಿದೆ.
ಮಸ್ಕತ್‍ನಿಂದ ಆಗಮಿಸಿದ್ದ ವೆಸ್ಟ್ ಎಳೇರಿ ಪಂಚಾಯತ್‍ನ 37 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ. ಇತರ ರಾಜ್ಯ ಬಿಹಾರದಿಂದ ಬಂದಿದ್ದ ಅಜಾನೂರು ಪಂಚಾಯತ್‍ನ 25 ವರ್ಷದ ಯುವಕನಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯಲ್ಲಿ 5336 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. ಮನೆಗಳಲ್ಲಿ 4342 ಮಂದಿ, ಸಾಂಸ್ಥಿಕವಾಗಿ 994 ಮಂದಿ ನಿಗಾದಲ್ಲಿರುವರು. ನೂತನವಾಗಿ 375 ಮಂದಿ ನಿಗಾ ಪ್ರವೇಶಿಸಿದ್ದಾರೆ. 441 ಮಂದಿ ತಮ್ಮ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ನೂತನವಾಗಿ 1273 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 676 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕೇರಳ ರಾಜ್ಯದಲ್ಲಿ ಭಾನುವಾರ 1908 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 1110 ಮಂದಿ ರೋಗ ಮುಕ್ತರಾಗಿದ್ದಾರೆ. ರೋಗ ಬಾಧಿತರ ಪೈಕಿ 35 ಮಂದಿ ವಿದೇಶದಿಂದ, 105 ಮಂದಿ ಇತರ ರಾಜ್ಯಗಳಿಂದ ಬಂದವರು. 1718 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 50 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ತಗಲಿದೆ.
ತಿರುವನಂತಪುರ-397, ಆಲಪ್ಪುಳ-241, ಎರ್ನಾಕುಳಂ-200, ಮಲಪ್ಪುರಂ-186, ಕಣ್ಣೂರು-143, ಕೊಲ್ಲಂ-133, ಕಲ್ಲಿಕೋಟೆ-119, ತೃಶ್ಶೂರು-116, ಕೋಟ್ಟಾಯಂ-106, ಪತ್ತನಂತಿಟ್ಟ-104, ಕಾಸರಗೋಡು-85, ಪಾಲ್ಘಾಟ್-39, ಇಡುಕ್ಕಿ-29, ವಯನಾಡು-10 ಎಂಬಂತೆ ರೋಗ ಬಾಧಿಸಿದೆ. ಇನ್ನೊಂದೆಡೆ ಭಾನುವಾರ ಐದು ಮಂದಿಯ ಸಾವು ಕೊರೋನಾ ವೈರಸ್ ಸೋಂಕಿನಿಂದ ಎಂಬುದಾಗಿ ದೃಢೀಕರಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 223 ಕ್ಕೇರಿತು.
ತಿರುವನಂತಪುರ-125, ಕೊಲ್ಲಂ-22, ಪತ್ತನಂತಿಟ್ಟ-45, ಆಲಪ್ಪುಳ-53, ಕೋಟ್ಟಾಯಂ-72, ಇಡುಕ್ಕಿ-19, ಎರ್ನಾಕುಳಂ-171, ತೃಶ್ಶೂರು-70, ಪಾಲ್ಘಾಟ್-250, ಮಲಪ್ಪುರಂ-100, ಕಲ್ಲಿಕೋಟೆ-12, ವಯನಾಡು-39, ಕಣ್ಣೂರು-88, ಕಾಸರಗೋಡು-44 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 20,300 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 37,649 ಮಂದಿ ಕೊರೋನಾ ರೋಗ ಮುಕ್ತರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss