Wednesday, June 29, 2022

Latest Posts

ಕೇರಳದಲ್ಲಿ ಭಾನುವಾರ 6684 ಮಂದಿಗೆ ರೋಗಮುಕ್ತಿ: 4581 ಜನರಿಗೆ ಕೋವಿಡ್ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಭಾನುವಾರ 4581 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ರೋಗ ನಿರ್ಣಯ ಮತ್ತು ಚಿಕಿತ್ಸೆ ಪಡೆದವರಲ್ಲಿ 6684 ಮಂದಿ ಗುಣಮುಖರಾದರು. ಕಳೆದ 24 ಗಂಟೆಗಳಲ್ಲಿ 46,126 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇಕಡಾ 9.93 ಎಂದು ತಿಳಿಸಲಾಗಿದೆ. ಕಲ್ಲಿಕೋಟೆ 574, ಮಲಪ್ಪುರಂ 558, ಅಲಪ್ಪುಳ 496, ಎರ್ನಾಕುಳಂ 489, ತೃಶೂರು 425, ಪಾಲಕ್ಕಾಡು 416, ಕೊಲ್ಲಂ 341, ತಿರುವನಂತಪುರ 314, ಕೋಟ್ಟಾಯಂ 266, ಕಣ್ಣೂರು 203, ಪತ್ತನಂತ್ತಿಟ್ಟ 171, ಇಡುಕ್ಕಿ 165, ವಯನಾಡು 101, ಕಾಸರಗೋಡು 62 ಎಂಬಂತೆ ಸೋಂಕು ಬಾಧಿಸಿದೆ.
ತಿರುವನಂತಪುರ 571, ಕೊಲ್ಲಂ 591, ಪತ್ತನಂತ್ತಿಟ್ಟ 164, ಆಲಪ್ಪುಳ 623, ಕೋಟ್ಟಾಯಂ 470, ಇಡಕ್ಕಿ 70, ಎರ್ನಾಕುಳಂ 828, ತೃಶೂರು 892, ಪಾಲಕ್ಕಾಡು 340, ಮಲಪ್ಪುರಂ 725, ಕಲ್ಲಿಕೋಟೆ 831, ವಯನಾಡು 126, ಕಣ್ಣೂರು 336, ಕಾಸರಗೋಡು 117 ಎಂಬಂತೆ ರೋಗಮುಕ್ತರಾದರು. ಇದಲ್ಲದೆ 74,802 ಜನರಿಗೆ ಸೋಂಕು ಈಗಲೂ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 4,48,207 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಕೊರೋನಾ ಕಾರಣದಿಂದ ಭಾನುವಾರ 21
ಜನರು ಸಾವಿಗೀಡಾದರು. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1869 ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss