ಕಾಸರಗೋಡು: ಕೇರಳದಲ್ಲಿ ಭಾನುವಾರ 9347 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ರಾಜ್ಯದಲ್ಲಿ 25 ಮಂದಿಯ ಸಾವು ದೃಢೀಕರಿಸಲಾಗಿದ್ದು , ಕೊರೋನಾ ಬಾಧಿಸಿ ಒಟ್ಟು ಸತ್ತವರ ಸಂಖ್ಯೆ 1003 ಕ್ಕೇರಿತು. ರೋಗ ಬಾಧಿತರಲ್ಲಿ 46 ಮಂದಿ ವಿದೇಶದಿಂದ ಹಾಗೂ 155 ಮಂದಿ ಇತರ ರಾಜ್ಯದಿಂದ ಬಂದವರು. 8216 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 821 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. 105 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 4 ಮಂದಿ ಐಎನ್ಎಚ್ಎಸ್ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ. 8924 ಮಂದಿ ಗುಣಮುಖರಾಗಿದ್ದಾರೆ.
ಮಲಪ್ಪುರಂ-1451, ಎರ್ನಾಕುಳಂ-1228, ಕಲ್ಲಿಕೋಟೆ-1219, ತೃಶ್ಶೂರು-960, ತಿರುವನಂತಪುರ-797, ಕೊಲ್ಲಂ-712, ಪಾಲಕ್ಕಾಡು-640, ಆಲಪ್ಪುಳ-619, ಕೋಟ್ಟಾಯಂ-417, ಕಣ್ಣೂರು-413, ಪತ್ತನಂತ್ತಿಟ್ಟ-378, ಕಾಸರಗೋಡು-242, ವಯನಾಡು-148, ಇಡುಕ್ಕಿ-123 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-1200, ಕೊಲ್ಲಂ-1421, ಪತ್ತನಂತ್ತಿಟ್ಟ-240, ಆಲಪ್ಪುಳ-729, ಕೋಟ್ಟಾಯಂ-161, ಇಡುಕ್ಕಿ-50, ಎರ್ನಾಕುಳಂ-1036, ತೃಶ್ಶೂರು-580, ಪಾಲಕ್ಕಾಡು-546, ಮಲಪ್ಪುರಂ-1059, ಕಲ್ಲಿಕೋಟೆ-954, ವಯನಾಡು-96, ಕಣ್ಣೂರು-347, ಕಾಸರಗೋಡು-505 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 96,316 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,91,798 ಮಂದಿ ಗುಣಮುಖರಾಗಿದ್ದಾರೆ.