ಕಾಸರಗೋಡು: ಕೇರಳದಲ್ಲಿ ಮಂಗಳವಾರ 1083 ಮಂದಿಗೆ ಹೊಸದಾಗಿ ಕೋವಿಡ್ ದೃಢಪಟ್ಟಿದೆ. ಈ ಪೈಕಿ 902 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲಿ 91 ಮಂದಿಗೆ ಕೊರೋನಾ ದೃಢಪಟ್ಟಿದ್ದು , ಇದರಲ್ಲಿ 85 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ.
ತಿರುವನಂತಪುರ ಜಿಲ್ಲೆಯಲ್ಲಿ 242 (237 ಸಂಪರ್ಕ), ಎರ್ನಾಕುಳಂ-135 (122), ಮಲಪ್ಪುರಂ-131 (118), ಆಲಪ್ಪುಳ-126 (75), ಕಲ್ಲಿಕೋಟೆ-97 (78), ಕಾಸರಗೋಡು-91 (85), ತೃಶೂರು-72 (55), ಪಾಲಕ್ಕಾಡು-50 (23), ಕಣ್ಣೂರು-37 (29), ಪತ್ತನಂತಿಟ್ಟ-32 (17), ಕೊಲ್ಲಂ-30 (25), ಕೋಟ್ಟಾಯಂ-23 (22), ವಯನಾಡು-17 (16) ಮಂದಿಗೆ ಕೊರೋನಾ ದೃಢಪಡಿಸಲಾಗಿದೆ. ಈ ಮಧ್ಯೆ ಇಡುಕ್ಕಿ ಜಿಲ್ಲೆಯ ವರದಿ ಲಭಿಸಿಲ್ಲ.
ರಾಜ್ಯದಲ್ಲಿ 902 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದ್ದು , 71 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಆರೋಗ್ಯ ಕಾರ್ಯಕರ್ತರು-16, ಐಟಿಬಿಪಿ-35, ಕೆಎಸ್ಇ-11, ಐಎನ್ ಎಚ್ ಎಸ್-4 ಜನರಿಗೆ ಕೋವಿಡ್ ಬಾಧಿಸಿದ್ದು , 51 ಮಂದಿ ವಿದೇಶದಿಂದ ಆಗಮಿಸಿದವರು ಹಾಗೂ 64 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು ರೋಗಕ್ಕೆ ತುತ್ತಾಗಿದ್ದಾರೆ.
ತಿರುವನಂತಪುರ 310, ಕೋಟ್ಟಾಯಂ 107, ಕಣ್ಣೂರು 103, ಮಲಪ್ಪುರಂ 94, ಪತ್ತನಂತಿಟ್ಟ 62, ಪಾಲಕ್ಕಾಡು 56, ಆಲಪ್ಪುಳ 55, ಎರ್ನಾಕುಳಂ 49, ತೃಶೂರು 45, ಕಲ್ಲಿಕೋಟೆ 44, ಕೊಲ್ಲಂ 36, ಇಡುಕ್ಕಿ 26, ಕಾಸರಗೋಡು 25 ಮತ್ತು ವಯನಾಡು ಜಿಲ್ಲೆಯಲ್ಲಿ 9 ಜನರು ಗುಣಮುಖರಾಗಿದ್ದಾರೆ.
ಕೇರಳದಲ್ಲಿ ಇದುವರೆಗೆ ರೋಗ ದೃಢಪಟ್ಟವರು 27,494 ಮಂದಿ ಆಗಿದ್ದು , ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 11,540 ಆಗಿದೆ. ರೋಗ ಮುಕ್ತಿಯಾದವರು 16,303 ಮಂದಿ ಆಗಿದ್ದಾರೆ. ಹೊಸದಾಗಿ ಮೂವರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಬಾಧಿಸಿ ಇದುವರೆಗೆ ಒಟ್ಟು 87 ಮಂದಿ ಮೃತಪಟ್ಟಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ದೃಢಪಟ್ಟ 91 ಮಂದಿಯಲ್ಲಿ 85 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸಂಪರ್ಕ ಮೂಲಕ ರೋಗ ದೃಢಗೊಂಡಿದೆ. 11 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. ವಿದೇಶದಿಂದ ಆಗಮಿಸಿದ ಇಬ್ಬರು ಮತ್ತು ಇತರ ರಾಜ್ಯಗಳಿಂದ ಆಗಮಿಸಿದ ಇಬ್ಬರಿಗೆ ಕೋವಿಡ್ ದೃಢಪಟ್ಟಿರುವುದಾಗಿ ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್ ತಿಳಿಸಿದ್ದಾರೆ.