ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಈ ಪೈಕಿ 145 ಜನರಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ಅಲ್ಲದೆ 266 ಮಂದಿ ರೋಗಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 2937 ಮಂದಿಗೆ ಕೋವಿಡ್ ಬಾಧಿಸಿದ್ದು , ಇಲ್ಲಿಯತನಕ ಒಟ್ಟು 15 ಜನರು ರೋಗ ತಗಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಕಾಸರಗೋಡು ನಗರಸಭೆ 3, ಮುಳಿಯರು ಪಂಚಾಯತ್ 1, ಕುಂಬಳೆ ಪಂಚಾಯತ್ 1, ಚೆಮ್ನಾಡು ಪಂಚಾಯತ್ 37, ಕಾರಡ್ಕ ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 3, ಕಾಞಂಗಾಡು ನಗರಸಭೆ 5, ಉದುಮ ಪಂಚಾಯತ್ 73, ತೃಕ್ಕರಿಪುರ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 13, ವೆಸ್ಟ್ ಎಳೇರಿ 1, ಕಿನಾನೂರು ಕರಿಂದಳಂ ಪಂಚಾಯತ್ 1, ಅಜಾನೂರು ಪಂಚಾಯತ್ 3, ಕೋಡೋಂ ಬೇಳೂರು ಪಂಚಾಯತ್ 1, ಬಳಾಲ್ ಪಂಚಾಯತ್ 1 ಮಂದಿ ಕೊರೋನಾ ಸೋಂಕು ಬಾಧಿತರು.
ಕೇರಳದಲ್ಲಿ ಮಂಗಳವಾರ 1417 ಮಂದಿಯಲ್ಲಿ ಹೊಸತಾಗಿ ಸೋಂಕು ಪತ್ತೆಹಚ್ಚಲಾಗಿದೆ. ಇದರಲ್ಲಿ 1242 ಮಂದಿಗೆ ಸಂಪರ್ಕದಿಂದ ವೈರಸ್ ತಗಲಿದೆ. ಅಲ್ಲದೆ 1426 ಜನರ ಕೋವಿಡ್ ಪರೀಕ್ಷೆ ನೆಗೆಟಿವ್ ಆಗಿದೆ. ಕೇರಳದಲ್ಲಿ ಇದುವರೆಗೆ 36,932 ಜನರಿಗೆ ಕೋವಿಡ್ ತಗಲಿದ್ದು , ಇಲ್ಲಿಯತನಕದ ಒಟ್ಟು ಸಾವು 120 ಆಗಿದೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಪೊಲೀಸ್ ನಿರ್ಬಂಧ ವ್ಯವಸ್ಥೆ ಯಥಾಸ್ಥಿತಿ ಮುಂದುವರಿಯಲಿದೆ. ಸಂಪರ್ಕ ಪಟ್ಟಿಗಳು, ನಿಯಂತ್ರಣ ವಲಯಗಳು ಮತ್ತು ಎಲ್ಲ ನಿರ್ಬಂಧ ವ್ಯವಸ್ಥೆಗಳನ್ನು ಪೊಲೀಸರ ಮೇಲ್ವಿಚಾರಣೆಯಲ್ಲಿ ಮಾಡಲಾಗುವುದು ಎಂದು ತಿರುವನಂತಪುರದಲ್ಲಿ ಮಂಗಳವಾರ ಜರಗಿದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಯಿತು. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಂಪರ್ಕ ಪಟ್ಟಿಯನ್ನು ಈಗ ಸಿದ್ಧಪಡಿಸಲಾಗುತ್ತಿದೆ ಎಂಬುದನ್ನು ವಿವರಿಸಲಾಯಿತು.
ರಾಜ್ಯದಲ್ಲಿ ಮಂಗಳವಾರ ಸೋಂಕು ಬಾಧಿತರಾದವರಲ್ಲಿ ಮಲಪ್ಪುರಂ 242, ತಿರುವನಂತಪುರ 291, ಪಾಲಕ್ಕಾಡು 141, ಕಾಸರಗೋಡು 147, ಎರ್ನಾಕುಳಂ 133, ಕೋಝಿಕ್ಕೋಡು 158, ಕಣ್ಣೂರು 30, ಕೊಲ್ಲಂ 25, ತೃಶೂರು 32, ಕೋಟ್ಟಾಯಂ 24, ವಯನಾಡು 18, ಆಲಪ್ಪುಳ 146, ಇಡುಕ್ಕಿ 4, ಪತ್ತನಂತಿಟ್ಟ 20 ಮಂದಿ ಒಳಗೊಂಡಿದ್ದಾರೆ. ಈ ಮಧ್ಯೆ ಕೇರಳದಲ್ಲಿ ಮಂಗಳವಾರ ತಿರುವನಂತಪುರ ಜಿಲ್ಲೆಯಲ್ಲಿ 3, ಎರ್ನಾಕುಳಂ 1, ಕಣ್ಣೂರು 1 ಸೇರಿ ಒಟ್ಟು 5 ಸಾವು ಸಂಭವಿಸಿದೆ.