ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 197 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 225 ಮಂದಿ ಗುಣಮುಖರಾಗಿದ್ದಾರೆ. ಸಂಪರ್ಕದಿಂದ 191 ಮಂದಿಗೆ ರೋಗ ಬಾಧಿಸಿದೆ. ಇತರ ರಾಜ್ಯಗಳಿಂದ ಬಂದ ನಾಲ್ವರಿಗೆ, ವಿದೇಶದಿಂದ ಬಂದ ಇಬ್ಬರಿಗೆ ರೋಗ ತಗಲಿದೆ. ಜಿಲ್ಲೆಯಲ್ಲಿ ಒಟ್ಟು ಇದುವರೆಗೆ 8711 ಮಂದಿಗೆ ಸೋಂಕು ಬಾಧಿಸಿದ್ದು , ಇವರಲ್ಲಿ 6694 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 1947 ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೈವಳಿಕೆ-2, ಮಧೂರು-9, ತೃಕ್ಕರೀಪುರ-5, ಪುತ್ತಿಗೆ-1, ಬೇಡಡ್ಕ-3, ಚೆಮ್ನಾಡು-18, ಉದುಮ-13, ಅಜಾನೂರು-6, ಪಳ್ಳಿಕೆರೆ-8, ಮಂಗಲ್ಪಾಡಿ-13, ಪಿಲಿಕೋಡು-2, ಕಾಞಂಗಾಡು-16, ಕಯ್ಯೂರು-1, ನೀಲೇಶ್ವರ-3, ಕಳ್ಳಾರು-4, ಪುಲ್ಲೂರು-2, ಕುಂಬಳೆ-11, ಕಾಸರಗೋಡು-19, ಮಡಿಕೈ-2, ಬದಿಯಡ್ಕ-7, ಪಡನ್ನ-4, ಮಂಜೇಶ್ವರ-2, ಪನತ್ತಡಿ-1, ಮೊಗ್ರಾಲ್ ಪುತ್ತೂರು-7, ಚೆಂಗಳ-31, ಕುತ್ತಿಕೋಲು-1, ಮುಳಿಯಾರು-4 ಎಂಬಂತೆ ರೋಗ ಬಾಧಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 225 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಕಾಸರಗೋಡು ನಗರಸಭೆ 14, ಮಧೂರು ಪಂಚಾಯತ್ 8, ಪುತ್ತಿಗೆ ಪಂಚಾಯತ್ 4, ಮುಳಿಯಾರು ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 2, ದೇಲಂಪಾಡಿ ಪಂಚಾಯತ್ 2, ಮಂಜೇಶ್ವರ ಪಂಚಾಯತ್ 2, ಪೈವಳಿಕೆ ಪಂಚಾಯತ್ 3, ಕುಂಬಳೆ ಪಂಚಾಯತ್ 7, ಬೇಡಡ್ಕ ಪಂಚಾಯತ್ 5, ಚೆಮ್ನಾಡು ಪಂಚಾಯತ್ 20, ಚೆಂಗಳ ಪಂಚಾಯತ್ 9, ಕುತ್ತಿಕೋಲು ಪಂಚಾಯತ್ 2, ಮುಳಿಯಾರು ಪಂಚಾಯತ್ 3, ಕಾರಡ್ಕ ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 5, ಕಾಞಂಗಾಡು ನಗರಸಭೆ 15, ಉದುಮ ಪಂಚಾಯತ್ 22, ಅಜಾನೂರು ಪಂಚಾಯತ್ 22, ಪಿಲಿಕೋಡು ಪಂಚಾಯತ್ 15, ಕಳ್ಳಾರು ಪಂಚಾಯತ್ 1, ನೀಲೇಶ್ವರ ನಗರಸಭೆ 5, ಕೋಡೋಂ ಬೇಳೂರು ಪಂಚಾಯತ್ 1, ಚೆರುವತ್ತೂರು ಪಂಚಾಯತ್ 2, ತೃಕ್ಕರೀಪುರ ಪಂಚಾಯತ್ 2, ಈಸ್ಟ್ ಎಳೇರಿ ಪಂಚಾಯತ್ 2, ಕಿನಾನೂರು ಕರಿಂದಳಂ ಪಂಚಾಯತ್ 2, ವೆಸ್ಟ್ ಎಳೇರಿ ಪಂಚಾಯತ್ 1, ಕಯ್ಯೂರು ಚೀಮೇನಿ ಪಂಚಾಯತ್ 3, ಪುಲ್ಲೂರು ಪೆರಿಯ ಪಂಚಾಯತ್ 18, ಕರಿವೆಳ್ಳೂರು ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ 4930 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. ಮನೆಗಳಲ್ಲಿ 3528 ಮಂದಿ, ಸಾಂಸ್ಥಿಕವಾಗಿ 1202 ಮಂದಿ ನಿಗಾದಲ್ಲಿರುವರು. ನೂತನವಾಗಿ 155 ಮಂದಿ ನಿಗಾ ಪ್ರವೇಶಿಸಿದ್ದಾರೆ. 275 ಮಂದಿ ಮಂಗಳವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 902 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 290 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕೇರಳದಲ್ಲಿ 4125 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ರಾಜ್ಯದಲ್ಲಿ 19 ಕೋವಿಡ್ ಸಾವುಗಳನ್ನು ಸರಕಾರ ದೃಢಪಡಿಸಿದೆ. ಸಂಪರ್ಕದ ಮೂಲಕ 3463 ಜನರಿಗೆ ಸೋಂಕು ತಗಲಿದೆ. ಇವುಗಳಲ್ಲಿ 412 ರ ಮೂಲ ಸ್ಪಷ್ಟವಾಗಿಲ್ಲ.
ತಿರುವನಂತಪುರ 681, ಮಲಪ್ಪುರಂ 444, ಎರ್ನಾಕುಳಂ 406, ಆಲಪ್ಪುಳ 403, ಕಲ್ಲಿಕೋಟೆ 394, ತೃಶೂರು 369, ಕೊಲ್ಲಂ 347, ಪಾಲಕ್ಕಾಡು 242, ಪತ್ತನಂತ್ತಿಟ್ಟ 207, ಕಾಸರಗೋಡು 197, ಕೋಟ್ಟಾಯಂ 169, ಕಣ್ಣೂರು 143, ವಯನಾಡು 81, ಇಡುಕ್ಕಿ 42 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ.
ರಾಜ್ಯದಲ್ಲಿ 3007 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 469, ಕೊಲ್ಲಂ 215, ಪತ್ತನಂತ್ತಿಟ್ಟ 117, ಆಲಪ್ಪುಳ 231, ಕೋಟ್ಟಾಯಂ 114, ಇಡುಕ್ಕಿ 42, ಎರ್ನಾಕುಳಂ 250, ತೃಶೂರು 240, ಪಾಲಕ್ಕಾಡು 235, ಮಲಪ್ಪುರಂ 468, ಕಲ್ಲಿಕೋಟೆ 130, ವಯನಾಡು 61, ಕಣ್ಣೂರು 214, ಕಾಸರಗೋಡು 225 ಎಂಬಂತೆ ನೆಗೆಟಿವ್ ಆಗಿದೆ. ಇದೇ ವೇಳೆ ರಾಜ್ಯದಲ್ಲಿ 87 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಬಾಧಿಸಿದೆ. ಕಳೆದ 24 ಗಂಟೆಗಳಲ್ಲಿ 38,574 ಮಾದರಿಗಳನ್ನು ಪರೀಕ್ಷಿಸಲಾಯಿತು. 3007 ಜನರನ್ನು ಗುಣಪಡಿಸಲಾಗಿದೆ. 3463 ಜನರಿಗೆ ಸಂಪರ್ಕದಿಂದ ಸೋಂಕು ಉಂಟಾಗಿದೆ. ಪ್ರಸ್ತುತ ಕೇರಳದಲ್ಲಿ 40,382 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.