Wednesday, July 6, 2022

Latest Posts

ಕೇರಳದಲ್ಲಿ ಮಂಗಳವಾರ 6620 ಮಂದಿಗೆ ರೋಗಮುಕ್ತಿ: 5792 ಜನರಿಗೆ ಕೋವಿಡ್ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಮಂಗಳವಾರ 5792 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ವಿವರಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ 6620 ಮಂದಿ ಸೋಂಕು ಮುಕ್ತರಾದರು. ಈ ಮಧ್ಯೆ ಕೇರಳದಲ್ಲಿ 27 ಮಂದಿ ಕೋವಿಡ್ ಸೋಂಕು ತಗಲಿ ಮೃತಪಟ್ಟರು. ಈ ಮೂಲಕ ರಾಜ್ಯಾದ್ಯಂತ ಸಾವಿನ ಸಂಖ್ಯೆ 1915 ಕ್ಕೆ ಏರಿಕೆಯಾಗಿದೆ. ಇದೇ ವೇಳೆ 70,070 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 4,61,394 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರೋಗ ಪತ್ತೆಯಾದವರಲ್ಲಿ 104 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4985 ಜನರಿಗೆ ಸೋಂಕು ತಗಲಿತು. 639 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,20,023 ಜನರು ಕಣ್ಗಾವಲಿನಲ್ಲಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ 776, ಕೊಲ್ಲಂ 682, ತೃಶೂರು 667, ಕಲ್ಲಿಕೋಟೆ 644, ಎರ್ನಾಕುಳಂ 613, ಕೋಟ್ಟಾಯಂ 429, ತಿರುವನಂತಪುರ 391, ಪಾಲಕ್ಕಾಡು 380, ಆಲಪ್ಪುಳ 364, ಕಣ್ಣೂರು 335, ಪತ್ತನಂತ್ತಿಟ್ಟ 202, ಇಡುಕ್ಕಿ 116, ವಯನಾಡು 97, ಕಾಸರಗೋಡು 96 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಚಿಕಿತ್ಸೆಗೆ ಒಳಗಾಗಿರುವ 6620 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 561, ಕೊಲ್ಲಂ 622, ಪತ್ತನಂತ್ತಿಟ್ಟ 154, ಆಲಪ್ಪುಳ 397, ಕೋಟ್ಟಾಯಂ 501, ಇಡುಕ್ಕಿ 54, ಎರ್ನಾಕುಳಂ 588, ತೃಶೂರು 723, ಪಾಲಕ್ಕಾಡು 820, ಮಲಪ್ಪುರಂ 497, ಕಲ್ಲಿಕೋಟೆ 831, ವಯನಾಡು 117, ಕಣ್ಣೂರು 625, ಕಾಸರಗೋಡು ಜಿಲ್ಲೆಯಲ್ಲಿ 130 ಜನರಿಗೆ ನೆಗೆಟಿವ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss