ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೇರಳದಲ್ಲಿ ಮಂಗಳವಾರ 7375 ಮಂದಿ ಗುಣಮುಖ: 6591 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಕೇರಳದಲ್ಲಿ ಮಂಗಳವಾರ 6591 ಮಂದಿಗೆ ಕೋವಿಡ್ ದೃಢಪಟ್ಟಿದೆ‌. ಕಾಸರಗೋಡು ಜಿಲ್ಲೆಯಲ್ಲಿ 145 ಮಂದಿಗೆ ಸೋಂಕು ತಗಲಿದೆ. ರಾಜ್ಯದಲ್ಲಿ 5771 ಮಂದಿಗೆ ಸಂಪರ್ಕ ಮೂಲಕ ಸೋಂಕು ಬಾಧಿಸಿದೆ.
ತೃಶೂರು 896 ( ಸಂಪರ್ಕ – 885), ಕಲ್ಲಿಕೋಟೆ 806 (735), ಮಲಪ್ಪುರಂ 786 (692), ಎರ್ನಾಕುಳಂ 644 (438), ಆಲಪ್ಪುಳ 592 (574), ಕೊಲ್ಲಂ 569 (556), ಕೋಟ್ಟಾಯಂ 473 (430), ತಿರುವನಂತಪುರಂ 470 (324), ಪಾಲಕ್ಕಾಡು 403 (242), ಕಣ್ಣೂರು 400 (372), ಪತ್ತನಂತ್ತಿಟ್ಟ 248 (195), ಕಾಸರಗೋಡು 145 (139), ವಯನಾಡು 87 (80), ಇಡುಕ್ಕಿ 72 (55) ಜನರಿಗೆ ರೋಗ ತಗಲಿದೆ.
ಕೇರಳದಲ್ಲಿ 707 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. 62 ಮಂದಿ ಆರೋಗ್ಯ ಕಾರ್ಯಕರ್ತರು, 105 ಮಂದಿ ವಿದೇಶದಿಂದ ಮತ್ತು ಇತರ ರಾಜ್ಯಗಳಿಂದ ಆಗಮಿಸಿದವರಿಗೆ ಕೋವಿಡ್ ದೃಢಪಟ್ಟಿದೆ.
7375 ಮಂದಿಗೆ ರೋಗಮುಕ್ತಿಯಾಗಿದೆ. ತಿರುವನಂತಪುರ 360, ಕೊಲ್ಲಂ 746, ಪತ್ತನಂತ್ತಿಟ್ಟ 301, ಆಲಪ್ಪುಳ 286, ಕೋಟ್ಟಾಯಂ 404, ಇಡುಕ್ಕಿ 85, ಎರ್ನಾಕುಳಂ 974, ತೃಶೂರು 760, ಪಾಲಕ್ಕಾಡು 271, ಮಲಪ್ಪುರಂ 1093, ಕಲ್ಲಿಕೋಟೆ 1029, ವಯನಾಡು 113, ಕಣ್ಣೂರು 544, ಕಾಸರಗೋಡು 409 ಮಂದಿ ಗುಣಮುಖರಾದರು. ಇದುವರೆಗೆ ರೋಗ ದೃಢಪಟ್ಟವರು 3,53,472, ಪ್ರಸ್ತುತ ರೋಗ ಬಾಧಿತರು 91,922, ರೋಗಮುಕ್ತಿ 2,60,243 ಹಾಗೂ ರಾಜ್ಯದಲ್ಲಿ ಒಟ್ಟು ಮೃತರು 1206 ಅಲ್ಲದೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಬಾಧಿಸಿ ಒಟ್ಟು ಮೃತಪಟ್ಟವರ ಸಂಖ್ಯೆ 162 ಕ್ಕೆ ಏರಿದೆ. ಮಂಗಳವಾರ ಕೇರಳದಲ್ಲಿ 24 ಮಂದಿ ಕೋವಿಡ್ ಬಾಧಿಸಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss