Wednesday, August 10, 2022

Latest Posts

ಕೇರಳದಲ್ಲಿ ಮಂಗಳವಾರ 79 ಮಂದಿಗೆ ಕೊರೋನಾ ದೃಢ : ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್ -19 ಪಾಸಿಟಿವ್

ಕಾಸರಗೋಡು: ಕೇರಳದಲ್ಲಿ ‌ಮಂಗಳವಾರ 79 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಪೈಕಿ 47 ಮಂದಿ ವಿದೇಶಗಳಿಂದ ಆಗಮಿಸಿದವರು. 26 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 5 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗುಲಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಎರಡು ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕೇರಳದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಜಿಲ್ಲೆಯ ವೈದ್ಯಕೀಯ ವಿಭಾಗ ಅಭಿಪ್ರಾಯಪಟ್ಟಿದೆ. ಮಲಪ್ಪುರಂ ಜಿಲ್ಲೆಯಲ್ಲಿ 15, ಎರ್ನಾಕುಳಂ – 13, ತ್ರಿಶೂರ್ – 7, ಕಣ್ಣೂರು – 7, ಆಲಪ್ಪುಳ – 7, ಪಾಲಕ್ಕಾಡ್ – 6, ಪತ್ತನಂತಿಟ್ಟ – 6, ಕೊಲ್ಲಂ – 4, ಕೋಟ್ಟಯಂ – 4, ಕೋಝಿಕ್ಕೋಡ್ – 4, ತಿರುವನಂತಪುರಂ – 4 ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಇಬ್ಬರಿಗೆ ಮಹಾಮಾರಿ ವೈರಸ್ ಬಾಧಿಸಿದೆ.
ರಾಜ್ಯದಲ್ಲಿ 60 ಮಂದಿಗೆ ರೋಗ ಮುಕ್ತಿ
ಕೇರಳದಲ್ಲಿ ಮಂಗಳವಾರ 60 ಮಂದಿ ಕೊರೋನಾ ಮುಕ್ತರಾಗಿದ್ದಾರೆ. ತಿರುವನಂತಪುರಂ – 14, ಪಾಲಕ್ಕಾಡ್ – 9, ಕಾಸರಗೋಡು – 8, ಮಲಪ್ಪುರಂ – 7, ಆಲಪ್ಪುಳ -5, ವಯನಾಡ್ – 5, ಕೋಟ್ಟಯಂ – 4, ತ್ರಿಶೂರ್ – 3, ಪತ್ತನಂತಿಟ್ಟ – 3, ಎರ್ನಾಕುಳಂ-1 ಮತ್ತು ಕಣ್ಣೂರು ಜಿಲ್ಲೆಯಲ್ಲಿ ಒಬ್ಬರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕು ಬಾಧಿತರು 2620 ಮಂದಿ ಆಗಿದ್ದು , ಇದರಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 1366 ಮಂದಿ ಆಗಿದ್ದಾರೆ. ಇದುವರೆಗೆ ರೋಗದಿಂದ ಗುಣಮುಖರಾದವರು 1234 ಮಂದಿ ಹಾಗೂ ಕೊರೋನಾ ಬಾಧಿಸಿ ಕೇರಳದಲ್ಲಿ ಒಟ್ಟು 20 ಮಂದಿ ಸಾವಿಗೀಡಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss