ಕಾಸರಗೋಡು: ಕೇರಳದಲ್ಲಿ ಮಂಗಳವಾರ 8764 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಇದರಲ್ಲಿ 8037 ಮಂದಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ಕೋವಿಡ್ ಸೋಂಕಿನಿಂದ 21 ಜನರು ಸಾವನ್ನಪ್ಪಿದ್ದಾರೆ. 7723 ಜನರನ್ನು ಗುಣಪಡಿಸಲಾಗಿದೆ. 95,407 ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ 48,253 ಮಾದರಿಗಳನ್ನು ಪರೀಕ್ಷಿಸಲಾಯಿತು. ಕೋವಿಡ್ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದರು.
ಮಲಪ್ಪುರಂ 1139, ಎರ್ನಾಕುಳಂ 1122, ಕಲ್ಲಿಕೋಟೆ 1113, ತೃಶೂರು 1010, ಕೊಲ್ಲಂ 907, ತಿರುವನಂತಪುರ 777, ಪಾಲಕ್ಕಾಡು 606, ಆಲಪ್ಪುಳ 488, ಕೋಟ್ಟಾಯಂ 476, ಕಣ್ಣೂರು 370, ಕಾಸರಗೋಡು 323, ಪತ್ತನಂತ್ತಿಟ್ಟ 244, ವಯನಾಡು 110, ಇಡುಕ್ಕಿ 79 ಎಂಬಂತೆ ಸೋಂಕು ಪತ್ತೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7723 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 815, ಕೊಲ್ಲಂ 410, ಪತ್ತನಂತ್ತಿಟ್ಟ 203, ಆಲಪ್ಪುಳ 534, ಕೋಟ್ಟಾಯಂ 480, ಇಡುಕ್ಕಿ 129, ಎರ್ನಾಕುಳಂ 1123, ತೃಶೂರು 650, ಪಾಲಕ್ಕಾಡು 385, ಮಲಪ್ಪುರಂ 772, ಕಲ್ಲಿಕೋಟೆ 1236, ವಯನಾಡು 122, ಕಣ್ಣೂರು 442, ಕಾಸರಗೋಡು 422 ಎಂಬಂತೆ ನೆಗೆಟಿವ್ ಆಗಿದೆ. ಇದಲ್ಲದೆ 95,407 ಜನರಿಗೆ ಸೋಂಕು ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 2,07,357 ಮಂದಿಯನ್ನು ಈ ವರೆಗೆ ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.
ಸಾರ್ವಜನಿಕರ ವರ್ತನೆ ನಿರಾಶಾದಾಯಕ: ಮುಖ್ಯಮಂತ್ರಿ
ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರ ವರ್ತನೆ ನಿರಾಶಾದಾಯಕವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೇಸರ ವ್ಯಕ್ತಪಡಿಸಿದರು. ಕೇರಳದ ಕೆಲವು ಮೀನು ಮಾರುಕಟ್ಟೆಗಳು ಮತ್ತು ರಸ್ತೆಬದಿಯ ಸ್ಟಾಲ್ಗಳು ಹಾಗೂ ಆಹಾರ ವಿತರಣಾ ಸಂಸ್ಥೆಗಳು ಸಾಮಾಜಿಕ ದೂರವನ್ನು ಒಳಗೊಂಡಂತೆ ಕೋವಿಡ್ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂದು ಅವರು ತಿಳಿಸಿದರು. ಕೊರೋನಾದ ಬಳಿಕ ವಿದೇಶಗಳಲ್ಲಿ ಉದ್ಯೋಗ ಕಳೆದುಕೊಂಡು ಮನೆಗೆ ಮರಳಿದವರು ರಸ್ತೆಗಳ ಬದಿಯಲ್ಲಿ ಅನೇಕ ಸಣ್ಣ ಚಿಲ್ಲರೆ ವ್ಯಾಪಾರಿಗಳಲ್ಲಿ ನಿರತರಾಗಿರುವರು. ರಸ್ತೆಬದಿಯಲ್ಲಿ ವ್ಯಾಪಾರ ಮಾಡುವ ಮೂಲಕ ಜೀವನ ಸಾಗಿಸುವವರಿಗೆ ಪ್ರೋತ್ಸಾಹಕವಾಗಿ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಅವರಿಗೆ ಸಹಾಯ ಮಾಡಬಹುದು. ಆದರೆ ಜನರು ಇಂತಹ ಕೇಂದ್ರಗಳಲ್ಲಿ ಒಟ್ಟು ಸೇರುವುದು ಸರಿಯಲ್ಲ ಮತ್ತು ಸರಿಯಾದ ಸುರಕ್ಷಾ ಮಾನದಂಡಗಳನ್ನು ಪಾಲಿಸಬೇಕು ಎಂದು ಸಿಎಂ ಹೇಳಿದರು.