Sunday, June 26, 2022

Latest Posts

ಕೇರಳದಲ್ಲಿ ಮತ್ತೊಂದು ಡೆಡ್ಲಿ ಸೋಂಕು: ಕೋಯಿಕ್ಕೋಡ್‌ನಲ್ಲಿ ಪತ್ತೆಯಾಗಿದೆ ‘ಶಿಗೆಲ್ಲಾ’

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಬರುವ ಮೊದಲೇ ಕೇರಳದಲ್ಲಿ ಮತ್ತೊಂದು ಸೋಂಕು ಕಾಣಿಸಿಕೊಂಡಿದ್ದು, ವ್ಯಾಪಕ ಆತಂಕ ಹುಟ್ಟುಹಾಕಿದೆ.
ಶಿಗೆಲ್ಲಾ ಹೆಸರಿನ ಈ ಸೋಂಕು ಕೋಯಿಕ್ಕೋಡ್‌ನಲ್ಲಿ ಪತ್ತೆಯಾಗಿದೆ. ಇದುವರೆಗೆ ಆರು ಮಂದಿಯಲ್ಲಿ ಶಿಗೆಲ್ಲಾ ಸೋಂಕು ಖಚಿತವಾಗಿದ್ದು, 20 ಮಂದಿಯಲ್ಲಿ ಶಂಕಿತ ಸೋಂಕು ಪ್ರಕರಣಗಳು ದಾಖಲಾಗಿವೆ. ಆತಂಕದ ವಿಚಾರ ಎಂದರೆ, ಸೋಂಕಿತರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು.
ಏನಿದು ಶಿಗೆಲ್ಲಾ?
ಶಿಗೆಲ್ಲಾ ಎಂಬುದು ಬ್ಯಾಕ್ಟೀರಿಯಾವಾಗಿದ್ದು, ಅತಿಸಾರ, ಜ್ವರ ಮತ್ತು ಹೊಟ್ಟೆನೋವು ಇದರ ಸಾಮಾನ್ಯ ಲಕ್ಷಣ. ಈ ಎಲ್ಲ ಲಕ್ಷಣಗಳು ಕಾಣಿಸದೆಯೂ ಸೋಂಕು ಇರುವ ಸಾಧ್ಯತೆಯಿದೆ.  ಮೂರು ದಿನಕ್ಕಿಂತ ಹೆಚ್ಚು ದಿನ ಅತಿಸಾರ ಮತ್ತು ಇತರೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣುವುದು ಅಗತ್ಯ. ಈ ಬ್ಯಾಕ್ಟೀರಿಯಾವು ಕಲುಷಿತ ನೀರು ಮತ್ತು ಆಹಾರದಿಂದ ಹರಡುತ್ತದೆ ಎಂದು ಪತ್ತೆಹಚ್ಚಲಾಗಿದೆ.
ಕೋಯಿಕ್ಕೋಡ್‌ನಲ್ಲಿ ಶಿಗೆಲ್ಲಾ ಸೋಂಕು ತನ್ನ ಪಾಲಿಕೆಯ ವ್ಯಾಪ್ತಿಯ ಕೊಟ್ಟಪರಂಬು ವಾರ್ಡ್‌ನಲ್ಲಿ ಮಾತ್ರ ಕಾಣಿಸಿಕೊಂಡಿದೆ. ಶಂಕಿತ ಸೋಂಕಿಗೆ ಒಳಗಾದ 11 ವರ್ಷದ ಮಗು ಕಳೆದ ವಾರ ಮೃತಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss