Thursday, August 11, 2022

Latest Posts

ಕೇರಳದಲ್ಲಿ ಮಹಿಳಾ ವಸತಿಗೃಹ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ತಿರುವನಂತಪುರ: ವಿವಿಧ ಅಗತ್ಯಗಳಿಗೆ ಮನೆಯಿಂದ ಹೊರಗಡೆ ಪ್ರಯಾಣಿಸುವ ಮಹಿಳೆಯರಿಗೆ ವಿಶ್ರಾಂತಿ ಪಡೆಯಲು ಹಾಗೂ ರಾತ್ರಿ ಸಮಯದಲ್ಲೂ ಸುರಕ್ಷಿತವಾಗಿ ತಂಗಲು ಕೇರಳದಲ್ಲಿ ಮಹಿಳಾ ವಸತಿಗೃಹ (ಶೀ ಲಾಡ್ಜ್ )ಗಳನ್ನು ನಿರ್ಮಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಅಂಗೀಕರಿಸಲಾಗಿದೆ. ಆಯ್ಕೆಯಾದ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಇಂತಹ ಲಾಡ್ಜ್ ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ರೀತಿಯ ವಸತಿಗೃಹಗಳನ್ನು ನಡೆಸುವ ಹೊಣೆಗಾರಿಕೆಯನ್ನು ಕುಟುಂಬಶ್ರೀ ಘಟಕಗಳಿಗೆ ವಹಿಸಿಕೊಡಲಾಗುವುದು. ವಸತಿಗೃಹ ಕಟ್ಟಡ ನಿರ್ಮಿಸಲು ಹಾಗೂ ಅವುಗಳ ದುರಸ್ತಿ ಕೆಲಸಗಳಿಗಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ರಾಜ್ಯ ಸರಕಾರವು ಅಗತ್ಯದ ಆರ್ಥಿಕ ನೆರವು ಒದಗಿಸಲಿದೆ.
ಕನಿಷ್ಠ 8 ಹಾಸಿಗೆಗಳ ಸೌಕರ್ಯ ಹೊಂದಿರುವ ಕಟ್ಟಡ ನಿರ್ಮಿಸಬೇಕು ಅಲ್ಲದೆ ಸಂಪೂರ್ಣ ಶುಚಿತ್ವ ಹೊಂದಿರುವ ಪಾಯಿಖಾನೆ, ಸ್ನಾನದ ಕೊಠಡಿಗಳನ್ನು ನಿರ್ಮಿಸಬೇಕು. ಅಡುಗೆ ಕೋಣೆ, ಶುದ್ಧ ನೀರಿನ ಸೌಲಭ್ಯ , ಟಿ.ವಿ., ರೆಫ್ರಿಜರೇಟರ್, ವೈ ಫೈ , ಸಿಸಿ ಟಿವಿ ಕ್ಯಾಮೆರಾ ಸೌಕರ್ಯಗಳನ್ನು ಕಡ್ಡಾಯವಾಗಿ ಏರ್ಪಡಿಸಬೇಕಾಗಿದೆ. ಇಂತಹ ಮಹಿಳಾ ವಸತಿಗೃಹಗಳ ನಿರ್ಮಾಣಕ್ಕಾಗಿ ಆಯಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು, ಕುಟುಂಬಶ್ರೀಯ ಜಿಲ್ಲಾ ಮಿಷನ್ ಕೋ – ಓರ್ಡಿನೇಟರ್ ಗಳನ್ನು ಒಳಗೊಂಡ ಸಮಿತಿಗಳಿಗೆ ರೂಪು ನೀಡಲು ತಿರುವನಂತಪುರದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಜರಗಿದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss