Thursday, August 11, 2022

Latest Posts

ಕೇರಳದಲ್ಲಿ ಮಾಸ್ಕ್ ಧರಿಸದವರ ಪತ್ತೆಗೆ ಸೈಬರ್ ಸೆಲ್ ನ ಸಹಾಯ ಯಾಚಿಸಿದ ಪೊಲೀಸರು!

ಕಾಸರಗೋಡು: ಕೇರಳದಲ್ಲಿ ಕೋವಿಡ್-19 ಹರಡುವಿಕೆಯ ಶಕ್ತಿ ಕಡಿಮೆಯಾಗದ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಹೆಚ್ಚಿಸಲು ರಾಜ್ಯ ಪೊಲೀಸ್ ಇಲಾಖೆ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಮಾಸ್ಕ್ ಧರಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಈ ಬಗ್ಗೆ ಸೈಬರ್ ಸೆಲ್ ನ ಮೊರೆ ಹೋಗಿದ್ದಾರೆ. ಕೇರಳದಲ್ಲಿ ಮಾಸ್ಕ್ ಧರಿಸದವರ ವಿರುದ್ಧ ಪ್ರತಿದಿನ ಸರಾಸರಿ 2 ಸಾವಿರ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಇದೀಗ ಟ್ರಾಫಿಕ್ ತಪಾಸಣೆಗಿರುವ ಸಿಸಿ ಟಿವಿ ಕ್ಯಾಮರಾ ಬಳಸಿ ಮಾಸ್ಕ್ ಧರಿಸದವರ ಪತ್ತೆಗೆ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ಪ್ರಸಕ್ತ ಟ್ರಾಫಿಕ್ ಕಾನೂನು ಉಲ್ಲಂಘಿಸುವುದು, ಸೀಟ್ ಬೆಲ್ಟ್ ಧರಿಸದವರು ಮತ್ತು ಹೆಲ್ಮೆಟ್ ಧರಿಸದವರನ್ನು ರಸ್ತೆ ಬದಿಯ ಸಿಸಿ ಕ್ಯಾಮರಾ ಮೂಲಕ ಪತ್ತೆಹಚ್ಚಲಾಗುತ್ತಿದ್ದು , ಇದರೊಂದಿಗೆ ಮಾಸ್ಕ್ ಧರಿಸದೇ ಸಂಚರಿಸುವವರನ್ನು ಈ ರೀತಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಯೋಜನೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಸಾಫ್ಟ್ ವೇರ್ ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ತರಲು ಪೊಲೀಸ್ ಸೈಬರ್ ಸೆಲ್ ಶ್ರಮಿಸುತ್ತಿದೆ.
ವಾಹನಗಳಲ್ಲಿ ಸಂಚರಿಸುವವರನ್ನು ಮಾತ್ರ ಕೇಂದ್ರೀಕರಿಸಿ ಕ್ಯಾಮರಾದಲ್ಲಿ ದಾಖಲಾಗುವ ಫೋಟೋ ಬಳಸಿ ಸುಲಭವಾಗಿ ಮಾಸ್ಕ್ ಧರಿಸದ ಆರೋಪಿಗಳ ಪತ್ತೆಗೆ ಯೋಜನೆ ಸಿದ್ಧಪಡಿಸಲಾಗಿದೆ. ವಾಹನ ನಂಬರ್ ಪತ್ತೆ ಹಚ್ಚಿ ಅದರ ಮಾಲೀಕರಿಗೆ ಮಾಸ್ಕ್ ಧರಿಸದಿರುವ ಬಗ್ಗೆ ನೋಟೀಸ್ ನೀಡಲು ಅಗತ್ಯದ ಕ್ರಮ ಕೈಗೊಳ್ಳಲಾಗುತ್ತಿದೆ. ಮಾಸ್ಕ್ ಧರಿಸದೇ ಓಡಾಡುವ ಪಾದಚಾರಿಗಳನ್ನು ಪತ್ತೆಹಚ್ಚಲು ಸಿಸಿ ಕ್ಯಾಮರಾ ಮೂಲಕ ಅಷ್ಟು ಸುಲಭವಿಲ್ಲ. ಈ ನಿಟ್ಟಿನಲ್ಲಿ ಸ್ಟೋರೇಜ್ ಸಮಸ್ಯೆ ಎದುರಾಗುವುದರಿಂದ ಪಾದಚಾರಿಗಳನ್ನು ಈ ವ್ಯವಸ್ಥೆಯಿಂದ ಸದ್ಯಕ್ಕೆ ಹೊರತುಪಡಿಸಿರುವುದಾಗಿ ಪೊಲೀಸ್ ಇಲಾಖೆಯ ಸೈಬರ್ ಸೆಲ್ ವಿಭಾಗ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss