Monday, July 4, 2022

Latest Posts

ಕೇರಳದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆ: ಇಡುಕ್ಕಿ ಓರೆಂಜ್, 8 ಜಿಲ್ಲೆ ಎಲ್ಲೋ ಅಲರ್ಟ್

ಕಾಸರಗೋಡು: ಕೇರಳದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಂಭವ ಇದೆ ಎಂದು ತಿರುವನಂತಪುರ ಹವಾಮಾನ ಇಲಾಖೆ ತಿಳಿಸಿದೆ.
ಇಡುಕ್ಕಿ ಜಿಲ್ಲೆಯನ್ನು ಶುಕ್ರವಾರ ಮತ್ತು ಶನಿವಾರ ಓರೆಂಜ್ ಝೋನ್ ಆಗಿ ಘೋಷಿಸಲಾಗಿದೆ. ಉಳಿದಂತೆ 8 ಜಿಲ್ಲೆಗಳು ಎಲ್ಲೋ ಅಲರ್ಟ್ ಝೋನ್ ಆಗಿವೆ. ಆಗ್ನೇಯ ಅರಬ್ಬೀ ಸಮುದ್ರದಲ್ಲಿ ಮೇ 31 ಭಾನುವಾರದ ವೇಳೆಗೆ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಲಿದ್ದು ಇದರಿಂದ ಜೂನ್ 1 ಸೋಮವಾರದಿಂದ ಮುಂಗಾರು ಮಳೆ ಆರಂಭವಾಗುವುದೆಂದು ನಿರೀಕ್ಷಿಸಲಾಗಿದೆ. ಗುಡುಗು ಮಿಂಚು ಸಹಿತ ಮಳೆಯಾಗಲಿದ್ದು ಪ್ರಬಲ ಗಾಳಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss