ತಿರುವನಂತಪುರಂ: ಈಗಾಗಲೇ ಇರುವ ಆಸ್ಪತ್ರೆಗಳನ್ನು ಕೋವಿಡ್ ಸೆಂಟರ್ಗಳನ್ನಾಗಿ ಮಾಡಿದ್ದು, ಕೇರಳಾದಲ್ಲಿ ಮೊದಲ ಕೋವಿಡ್ ಆಸ್ಪತ್ರೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ್ದಾರೆ.
ಕಾಸರಗೋಡಿನ ತೆಕ್ಕಿಲ್ ಗ್ರಾಮದ ಚಟ್ಟಂಚಾಲ್ನಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು, ಕೇವಲ ಕೋವಿಡ್ ರೋಗಿಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟಾಟಾ ಗ್ರೂಪ್ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು, ಕೊರೋನಾ ಆರಂಭಿಕ ಹಂತದಲ್ಲೇ ತಡೆಗಟ್ಟಲು ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಣಿಡಲು ಇದು ಸಹಕಾರಿಯಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ಆಸ್ಪತ್ರೆಗಾಗಿ ೨೭೩ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ. ಕೊರೋನಾದಿಂದ ದೇಶ ಮುಕ್ತವಾಗಲು ಇನ್ನಷ್ಟು ಸೌಲಭ್ಯ ನೀಡುತ್ತೇವೆ ಎಂದು ಆರೋಗ್ಯ ಸಚಿವೆ ಕೆ.ಶೈಲಜಾ ಹೇಳಿದರು.