Friday, August 12, 2022

Latest Posts

ಕೇರಳದಲ್ಲಿ ವಿಮಾನ ಪತನ: ಭಾರತದ ಮಾಜಿ ವಾಯುಪಡೆಯ ಪೈಲಟ್ ದೀಪಕ್ ಸಾಥೆ ನಿಧನ

ಕೋಯಿಕೋಡ್: ಕೇರಳದ ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ವಿಮಾನ ಲ್ಯಾಂಡ್ ಆಗುವ ವೇಳೆ ರನ್ ವೇಯನ್ನು ಓವರ್‌ಶಾಟ್ ಮಾಡಿದ ದುರದೃಷ್ಟದದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲಟ್ ಕ್ಯಾಪ್ಟನ್, ಭಾರತದ ಮಾಜಿ ವಾಯುಪಡೆಯ ಪೈಲಟ್, ಸ್ವೋರ್ಡ್ ಆಫ್ ಆನರ್ ಪ್ರಶಸ್ತಿ ಪುರಸ್ಕೃತ ದೀಪಕ್ ಸಾಥೆ ಅವರು ಬಲಿಯಾಗಿದ್ದಾರೆ.

180 ಪ್ರಯಾಣಿಕರು ಮತ್ತು ಸಿಬ್ಬಂದಿಗಳೊಂದಿಗೆ ದುಬೈ-ಕ್ಯಾಲಿಕಟ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ರನ್ ವೇ ನಲ್ಲಿ ಜಾರಿದ ಪರಿಣಾಮ ಪೈಲೆಟ್ ಸೇತರಿ 17 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ವಿಮಾನವು ಎರಡು ಭಾಗಗಳಾಗಿ ಮುರಿದು ಬಿದ್ದಿದೆ.

ಕ್ಯಾಪ್ಟನ್ ದೀಪಕ್ ವಿ ಸಾಥೆ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 58 ನೇ ಕೋರ್ಸ್‌ ನವರು. ಅವರು ಜೂಲಿಯೆಟ್ ಸ್ಕ್ವಾಡ್ರನ್ ನಿಂದ ಬಂದವರು ಎಂದು ಏರ್ ಮಾರ್ಷಲ್ ಭೂಷಣ್ ಗೋಖಲೆ (ನಿವೃತ್ತ) ತಿಳಿಸಿದ್ದಾರೆ.

ಸಾಥೆ ಜೂನ್ 1981 ರಲ್ಲಿ ವಾಯುಪಡೆಯ ಅಕಾಡೆಮಿಯಿಂದ ಸ್ವೋರ್ಡ್ ಆಫ್ ಆನರ್ ಪಡೆದಿದ್ದರು ಮತ್ತು ಭಾರತೀಯ ವಾಯುಸೇನೆಯಲ್ಲಿ ಫೈಟರ್ ಪೈಲಟ್ ಆಗಿದ್ದರು.

ಅವರು ಹೈದರಾಬಾದ್ ನ ವಾಯುಪಡೆಯ ಅಕಾಡೆಮಿಯಲ್ಲಿ ಗೌರವ ಖಡ್ಗವನ್ನು ಗೆದ್ದಿದ್ದರು ಮತ್ತು ವಾಣಿಜ್ಯ ಪೈಲಟ್ ಆಗುವ ಮೊದಲು ಒಬ್ಬ ನಿಪುಣ ಫೈಟರ್ ಪೈಲಟ್ ಆಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss