Sunday, August 14, 2022

Latest Posts

ಕೇರಳದಲ್ಲಿ ಶನಿವಾರ 2397 ಮಂದಿಗೆ ಕೊರೋನಾ ಸೋಂಕು: 2137 ಜನರಿಗೆ ರೋಗಮುಕ್ತಿ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 198 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ 45 ಮಂದಿ ಗುಣಮುಖರಾಗಿದ್ದಾರೆ. ಐವರು ಆರೋಗ್ಯ ಕಾರ್ಯಕರ್ತರು ಸಹಿತ 188 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಐವರು ಇತರ ರಾಜ್ಯದಿಂದ ಹಾಗೂ ಐವರು ವಿದೇಶದಿಂದ ಬಂದವರಿಗೆ ರೋಗ ತಗಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಪಳ್ಳಿಕೆರೆ-9, ಅಜಾನೂರು-19, ಮಡಿಕೈ-1, ಮುಳಿಯಾರು-6, ಕಾಸರಗೋಡು-12, ಚೆಂಗಳ-6, ಮೊಗ್ರಾಲ್‍ ಪುತ್ತೂರು-2, ಮಧೂರು-18, ಕುಂಬಳೆ-12, ಉದುಮ-1, ಚೆಮ್ನಾಡು-30, ಮಂಗಲ್ಪಾಡಿ-5, ಪುತ್ತಿಗೆ-2, ಬದಿಯಡ್ಕ-3, ಕಾಞಂಗಾಡು-12, ಎಣ್ಮಕಜೆ-1, ಕಯ್ಯೂರು ಚೀಮೇನಿ-4, ಮಂಜೇಶ್ವರ-2, ಕುತ್ತಿಕ್ಕೋಲು-1, ಕಿನಾನೂರು ಕರಿಂದಳಂ-2, ಕಳ್ಳಾರು-4, ಚೆರ್ವತ್ತೂರು-2, ವಲಿಯಪರಂಬ-6, ತೃಕ್ಕರಿಪುರ-3, ಪಿಲಿಕೋಡು-1, ಕೋಡೋಂ ಬೇಳೂರು-10, ಪೈವಳಿಕೆ-1, ಪಡನ್ನ-14, ದೇಲಂಪಾಡಿ-5, ನೀಲೇಶ್ವರ-2, ಕಡನ್ನಪ್ಪಳ್ಳಿ-1, ಚಪ್ಪಾರಪಡವ್-1 ಎಂಬಂತೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿರುವವರ ಸಂಖ್ಯೆ 5598 ಮಂದಿಯಾಗಿದ್ದು , ಮನೆಗಳಲ್ಲಿ 4773 ಮಂದಿ ಮತ್ತು ವಿವಿಧ ಕೇಂದ್ರಗಳಲ್ಲಿ 1025 ಮಂದಿ ಒಳಗೊಂಡಿದ್ದಾರೆ. 449 ಜನರನ್ನು ಹೊಸದಾಗಿ ಕ್ವಾರಂಟೈನ್ ಮಾಡಲಾಯಿತು. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 1068 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 798 ಜನರ ಪರೀಕ್ಷಾ ಫಲಿತಾಂಶಗಳನ್ನು ಇನ್ನೂ ಪಡೆಯಲು ಬಾಕಿಯಿದೆ. 335 ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 176 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. 214 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ 4880 ಮಂದಿಗಳಲ್ಲಿ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 541 ಜನರು ವಿದೇಶಗಳಿಂದ ಬಂದವರು. 392 ಜನರು ಇತರ ರಾಜ್ಯಗಳವರು ಮತ್ತು 3947 ಮಂದಿ ಸಂಪರ್ಕದ ಮೂಲಕ ಕೋವಿಡ್ ದೃಢಪಟ್ಟವರಾಗಿದ್ದಾರೆ. ಕೋವಿಡ್ ಇದುವರೆಗೆ 3453 ಜನರಿಗೆ ನಕಾರಾತ್ಮಕವಾಗಿದೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38ಕ್ಕೆ ಏರಿದೆ. ಜಿಲ್ಲೆಯಲ್ಲಿ 47 ಮಂದಿ ಸೋಂಕಿತರು ಗುಣಮುಖರಾದರು.
ಕೇರಳದಲ್ಲಿ ಶನಿವಾರ 2397 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 2137 ಮಂದಿಗೆ ಸಂಪರ್ಕದ ಮೂಲಕ ಕೋವಿಡ್ ಬಾಧಿಸಿದೆ. 2225 ಮಂದಿ ಸೋಂಕಿನಿಂದ ಮುಕ್ತರಾಗಿರುವರು. ಇದೇ ವೇಳೆ ರಾಜ್ಯದಲ್ಲಿ ಕೋವಿಡ್‍ನಿಂದ ಆರು ಸಾವುಗಳು ಸಂಭವಿಸಿವೆ.
ತಿರುವನಂತಪುರ-408, ಮಲಪ್ಪುರಂ-379, ಕೊಲ್ಲಂ-234, ತೃಶೂರು-225, ಕಾಸರಗೋಡು-198, ಆಲಪ್ಪುಳ-175, ಕಲ್ಲಿಕೋಟೆ-152, ಕೋಟ್ಟಾಯಂ-139, ಎರ್ನಾಕುಳಂ-136, ಪಾಲಕ್ಕಾಡು-133, ಕಣ್ಣೂರು-95, ಪತ್ತನಂತಿಟ್ಟ-75, ಇಡುಕ್ಕಿ-27, ವಯನಾಡು-21 ಮಂದಿಗೆ ಸೋಂಕು ಪತ್ತೆಯಾಗಿದೆ.
ತಿರುವನಂತಪುರ-591, ಕೊಲ್ಲಂ-104, ಪತ್ತನಂತಿಟ್ಟ-89, ಆಲಪ್ಪುಳ-236, ಕೋಟ್ಟಾಯಂ-120, ಇಡುಕ್ಕಿ-41, ಎರ್ನಾಕುಳಂ-148, ತೃಶೂರು-142, ಪಾಲಕ್ಕಾಡು-74, ಮಲಪ್ಪುರಂ-372, ಕಲ್ಲಿಕೋಟೆ-131, ವಯನಾಡು-38, ಕಣ್ಣೂರು-94, ಕಾಸರಗೋಡು-45 ಮಂದಿ ಸೋಂಕಿತರ ಫಲಿತಾಂಶ ನೆಗೆಟಿವ್ ಆಗಿದೆ. ರಾಜ್ಯದಲ್ಲಿ 23,277 ಮಂದಿ ಇನ್ನೂ ಚಿಕಿತ್ಸೆಯಲ್ಲಿರುವರು. 48,083 ಮಂದಿ ಕೋವಿಡ್ ನಿಂದ ಈ ವರೆಗೆ ಮುಕ್ತರಾದರು.

ರಾಜ್ಯದಲ್ಲಿ ಓಣಂ ಜನಸಂದಣಿ: ಜಾಗೃತರಾಗಲು ಕರೆ
ಓಣಂ ಹಬ್ಬಾಚರಣೆಯ ಹಿನ್ನೆಲೆಯಲ್ಲಿ ರಾಜ್ಯವು ಕಿಕ್ಕಿರಿದ ಜನ ಸಂದಣಿಯಲ್ಲಿದ್ದು ಇದು ಕಳವಳಕಾರಿ. ಸರಕಾರವು ಕೋವಿಡ್ ನಿರ್ಬಂಧಗಳ ಮತ್ತು ಮಾರ್ಗಸೂಚಿಗಳನ್ನು ಘೋಷಿಸಿದ್ದರೂ, ಹೆಚ್ಚಿನ ಜನರು ಮನೆಯಿಂದ ಹೊರಬರುತ್ತಿರುವುದು ಕಂಡುಬಂದಿದೆ. ಇದು ರಕ್ಷಣಾ ಕಾರ್ಯಾಚರಣೆಗಳಿಗೆ ಹಿನ್ನಡೆಯಾಗುತ್ತಿದೆ. ಸಂಪರ್ಕದ ಮೂಲಕ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಕೇರಳದ ದೈನಂದಿನ ಕೋವಿಡ್ ಪ್ರಕರಣಗಳು ಆತಂಕಕಾರಿ ಆಗಿರುವುದರಿಂದ ಅನಗತ್ಯ ಓಣಂ ಪ್ರವಾಸಗಳನ್ನು ಕೈಬಿಡಬೇಕು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಹೇಳಿದ್ದಾರೆ. ಕಂಟೈನ್ ಮೆಂಟ್ ವಲಯಗಳಲ್ಲಿ ನಿರ್ಬಂಧಗಳು ಮುಂದುವರಿಯಲಿವೆ ಮತ್ತು ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಓಣಂ ಆಚರಣೆಯನ್ನು ನಡೆಸುವಾಗ ಪೊಲೀಸರು ವಿಶೇಷ ಗಮನ ನೀಡಬೇಕು. ಜನರು ಓಣಂ ಸದ್ಯ (ಭೋಜನ) ಅಥವಾ ಇತರ ಸಾರ್ವಜನಿಕ ಸಮಾರಂಭಗಳ ಹೆಸರಿನಲ್ಲಿ ಒಟ್ಟುಗೂಡಬಾರದು ಎಂದು ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss