Monday, August 8, 2022

Latest Posts

ಕೇರಳದಲ್ಲಿ ಶನಿವಾರ 4644 ಮಂದಿಗೆ ಕೊರೋನಾ ಬಾಧೆ: 2862 ಜನರಿಗೆ ರೋಗಮುಕ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 191 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 176 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಇತರ ರಾಜ್ಯಗಳಿಂದ ಬಂದ 8 ಮಂದಿ ಹಾಗೂ ವಿದೇಶದಿಂದ ಬಂದ 7 ಮಂದಿಗೆ ರೋಗ ತಗಲಿದೆ. ಜಿಲ್ಲೆಯಲ್ಲಿ 203 ಮಂದಿ ಗುಣಮುಖರಾಗಿದ್ದಾರೆಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈ ವರೆಗೆ 8196 ಮಂದಿಗೆ ಸೋಂಕು ಬಾಧಿಸಿದ್ದು , 6119 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಜಿಲ್ಲೆಯ 2011 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಜಿಲ್ಲೆಯಲ್ಲಿ ಇಬ್ಬರು ಮರಣ ಹೊಂದಿದ್ದಾರೆ. ಕೋವಿಡ್ ಬಾಧಿಸಿ ಜಿಲ್ಲೆಯಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 66 ಕ್ಕೆ ಏರಿಕೆಯಾಗಿದೆ.
ಕಯ್ಯೂರು ಚೀಮೇನಿ-2, ಅಜಾನೂರು-5, ತೃಕ್ಕರೀಪುರ-10, ನೀಲೇಶ್ವರ-1, ಪಡನ್ನ-13, ಮಂಗಲ್ಪಾಡಿ-11, ಚೆರ್ವತ್ತೂರು-1, ಚೆಮ್ನಾಡು-3, ಉದುಮ-7, ಕುತ್ತಿಕ್ಕೋಲು-5, ಕಳ್ಳಾರು-9, ಕುಂಬಳೆ-7, ಪುತ್ತಿಗೆ-2, ಮಧೂರು-7, ಎಣ್ಮಕಜೆ-4, ಕಾಞಂಗಾಡು-14, ಮಡಿಕೈ-1, ಪೈವಳಿಕೆ-3, ಮೀಂಜ-1, ಕಾಸರಗೋಡು-16, ಚೆಂಗಳ-14, ಮೊಗ್ರಾಲ್ ಪುತ್ತೂರು-1, ಮುಳಿಯಾರು-2, ಪಳ್ಳಿಕೆರೆ-16, ಬದಿಯಡ್ಕ-4, ಮಂಜೇಶ್ವರ-7, ಬೇಡಡ್ಕ-12, ಪುಲ್ಲೂರು-8, ಪಿಲಿಕ್ಕೋಡು-3, ಕಿನಾನೂರು-1, ಬಳಾಲ್-1 ಎಂಬಂತೆ ರೋಗ ಬಾಧಿಸಿದೆ. ಕೇರಳದಲ್ಲಿ ಶನಿವಾರ 4644 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಗೊಂಡಿದೆ. ರಾಜ್ಯದಲ್ಲಿ 18 ಮಂದಿ ಕೋವಿಡ್ ವೈರಸ್ ಸೋಂಕಿನಿಂದ ಸಾವಿಗೀಡಾದರು. 3781 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 86 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ತಗಲಿದೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 37,488 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2862 ಮಂದಿ ರೋಗ ಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ತಿರುವನಂತಪುರ-824, ಮಲಪ್ಪುರಂ-534, ಕೊಲ್ಲಂ-436, ಕಲ್ಲಿಕೋಟೆ-412, ತೃಶ್ಶೂರು-351, ಎರ್ನಾಕುಳಂ-351, ಪಾಲಕ್ಕಾಡು-349, ಆಲಪ್ಪುಳ-348, ಕೋಟ್ಟಾಯಂ-263, ಕಣ್ಣೂರು-222, ಪತ್ತನಂತ್ತಿಟ್ಟ-221, ಕಾಸರಗೋಡು-191, ವಯನಾಡು-95, ಇಡುಕ್ಕಿ-47 ಎಂಬಂತೆ ರೋಗ ಬಾಧಿಸಿದೆ.
ತಿರುವನಂತಪುರ-564, ಕೊಲ್ಲಂ-243, ಪತ್ತನಂತ್ತಿಟ್ಟ-154, ಆಲಪ್ಪುಳ-224, ಕೋಟ್ಟಾಯಂ-119, ಇಡುಕ್ಕಿ-54, ಎರ್ನಾಕುಳಂ-189, ತೃಶ್ಶೂರು-191, ಪಾಲಕ್ಕಾಡು-130, ಮಲಪ್ಪುರಂ-326, ಕಲ್ಲಿಕೋಟೆ-344, ವಯನಾಡು-31, ಕಣ್ಣೂರು-91, ಕಾಸರಗೋಡು-203 ಎಂಬಂತೆ ಗುಣಮುಖರಾಗಿದ್ದಾರೆ.
ಕೇರಳದಲ್ಲಿ 86 ಮಂದಿ ಆರೋಗ್ಯ ಕಾರ್ಯಕರ್ತರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾದರು. ತಿರುವನಂತಪುರ 36, ಕಣ್ಣೂರು 12, ಕೊಲ್ಲಂ 6, ಎರ್ನಾಕುಳಂ, ತೃಶೂರು, ಮಲಪ್ಪುರಂ, ಕಲ್ಲಿಕೋಟೆ ತಲಾ 5, ಕಾಸರಗೋಡು 4, ಪತ್ತನಂತ್ತಿಟ್ಟ , ಆಲಪ್ಪುಳ, ಪಾಲಕ್ಕಾಡು, ವಯನಾಡು ತಲಾ 2 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಗೊಂಡಿದೆ. ಎರ್ನಾಕುಳಂ ಜಿಲ್ಲೆಯ 14 ಐಎನ್‍ಎಚ್ಎಸ್ ನೌಕರರು ಸೋಂಕಿಗೊಳಗಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss