ಕಾಸರಗೋಡು: ಕೇರಳದಲ್ಲಿ 1310 ಜನರಿಗೆ ಶುಕ್ರವಾರ ಕೋವಿಡ್ -19 ದೃಢಪಟ್ಟಿದೆ. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಈ ಅಂಕಿ ಅಂಶ ಹೊರಬಿದ್ದಿದೆ.
ಹೊಸದಾಗಿ ಅತೀ ಹೆಚ್ಚು ಸೋಂಕಿತರು ತಿರುವನಂತಪುರ ಜಿಲ್ಲೆಯಲ್ಲಿರುವರು. ಅದರಂತೆ ತಿರುವನಂತಪುರ ಜಿಲ್ಲೆಯಲ್ಲಿ 320, ಎರ್ನಾಕುಳಂ 132, ಪತ್ತನಂತಿಟ್ಟ 130, ವಯನಾಡು 124, ಕೊಟ್ಟಾಯಂ 89, ಕೋಝಿಕ್ಕೋಡು 84, ಪಾಲಕ್ಕಾಡು 83, ಮಲಪ್ಪುರಂ 75, ತೃಶೂರು 60 ಇಡುಕ್ಕಿ 59, ಕೊಲ್ಲಂ 53, ಕಾಸರಗೋಡು 52, ಆಲಪ್ಪುಳ 35 ಮತ್ತು ಕಣ್ಣೂರು ಜಿಲ್ಲೆಯಲ್ಲಿ 14 ಮಂದಿಗೆ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ 864 ಜನರು ಕೋವಿಡ್ ರೋಗದಿಂದ ಮುಕ್ತರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 129, ತಿರುವನಂತಪುರ 114, ಪಾಲಕ್ಕಾಡು 111, ಕೊಲ್ಲಂ 94, ಕೋಝಿಕ್ಕೋಡು 75, ಎರ್ನಾಕುಳಂ 66, ಕೊಟ್ಟಾಯಂ 65, ಇಡಕ್ಕಿ 45, ಪತ್ತನಂತಿಟ್ಟ 45, ಕಣ್ಣೂರು 41, ತೃಶೂರು 27, ಆಲಪ್ಪುಳ 25, ವಯನಾಡು 19 ಮತ್ತು ಮಲಪ್ಪುರಂ ಜಿಲ್ಲೆಯಲ್ಲಿ 9 ಜನರ ಫಲಿತಾಂಶ ಋಣಾತ್ಮಕವಾಗಿತ್ತು. ಸೋಂಕು ಪತ್ತೆಯಾದ 10,495 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13,027 ಜನರು ಈ ವರೆಗೆ ಕೋವಿಡ್ನಿಂದ ಗುಣಮುಖರಾಗಿರುವರು.
ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿ ತಿರುವನಂತಪುರ ಮತ್ತು ಎರ್ನಾಕುಳಂ ಜಿಲ್ಲೆಗಳು ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ತಿರುವನಂತಪುರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಪರ್ಕ ಪ್ರಕರಣಗಳು ಮತ್ತು ಸೋಂಕು ಹರಡಿದ ಮೂಲ ತಿಳಿಯದ ಪ್ರಕರಣಗಳಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ಕಂಟೈನ್ ಮೆಂಟ್ ವಲಯಗಳ ಮತ್ತು ಹಾಟ್ ಸ್ಪಾಟ್ಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಪ್ರಸ್ತುತ ತಿರುವನಂತಪುರ ಜಿಲ್ಲೆಯಲ್ಲಿ ಕರಾವಳಿ ಪ್ರದೇಶದ ಜೊತೆಗೆ ನಗರ ಪ್ರದೇಶಗಳತ್ತ ಕೋವಿಡ್ ಮುನ್ನುಗ್ಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಅಂಚುತೆಂಗ್, ಪುಡುಕುರುಸ್ಸಿ , ಪೊಯೂರ್ ಮತ್ತು ಪುಲ್ಲುವಿಲಾ ಕ್ಲಸ್ಟರ್ಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಏಕಾಏಕಿ ವೈರಸ್ ಉಲ್ಬಣಗೊಂಡಿರುವುದು ಕಂಡುಬರುತ್ತಿದೆ. ಯಾವುದೇ ರೋಗ ಲಕ್ಷಣಗಳನ್ನು ತೋರಿಸದ ಕೋವಿಡ್ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ತಿರುವನಂತಪುರ ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ಎರ್ನಾಕುಳಂನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ತೀವ್ರ ಅಸ್ವಸ್ಥ ರೋಗಿಗಳಿಗೆ ತಜ್ಞರ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ಹಲವು ಸೌಲಭ್ಯಗಳನ್ನು ಏರ್ಪಡಿಸಲಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲೂ ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಅತೀವ ಜಾಗ್ರತೆ ವಹಿಸಲಾಗಿದೆ.