ಕಾಸರಗೋಡು: ಕೇರಳದಲ್ಲಿ ಶುಕ್ರವಾರ 150 ಮಂದಿಗೆ ಕೋವಿಡ್ -19 ದೃಢಪಟ್ಟಿದೆ. ಕಾಸರಗೋಡು ಜಿಲ್ಲೆಯ ಇಬ್ಬರ ಕೊರೋನಾ ವರದಿ ಪಾಸಿಟಿವ್ ಆಗಿದೆ.
ವಿದೇಶದಿಂದ ಆಗಮಿಸಿದ 91 ಮಂದಿ ಹಾಗೂ ಇತರ ರಾಜ್ಯಗಳಿಂದ ಬಂದ 48 ಮಂದಿಗೆ ಶುಕ್ರವಾರ ಕೋವಿಡ್ ಬಾಧಿಸಿದೆ.
ಪಾಲಕ್ಕಾಡ್ – 23, ಆಲಪ್ಪುಳ – 21, ಕೋಟ್ಟಯಂ – 18, ಕೊಲ್ಲಂ – 16, ಮಲಪ್ಪುರಂ – 16, ಕಣ್ಣೂರು – 13, ಎರ್ನಾಕುಳಂ – 9, ತ್ರಿಶೂರು – 7, ಕೋಝಿಕ್ಕೋಡು – 7, ತಿರುವನಂತಪುರ – 7, ವಯನಾಡು – 5, ಪತ್ತನಂತಿಟ್ಟ – 4, ಕಾಸರಗೋಡು – 2, ಇಡುಕ್ಕಿ – 2 ಎಂಬಂತೆ ಕೊರೋನಾ ವೈರಸ್ ದೃಢೀಕರಿಸಲಾಗಿದೆ.
91 ಮಂದಿ ವಿದೇಶಗಳಿಂದ ಆಗಮಿಸಿದವರು ಮತ್ತು 48 ಮಂದಿ ಇತರ ರಾಜ್ಯಗಳಿಂದ ಬಂದವರು ಹಾಗೂ 10 ಮಂದಿಗೆ ಸಂಪರ್ಕದ ಮೂಲಕ ರೋಗ ತಗುಲಿದೆ.
ಕೇರಳದಲ್ಲಿ 65 ಮಂದಿಗೆ ರೋಗ ಮುಕ್ತಿ
ಕೇರಳ ರಾಜ್ಯದಲ್ಲಿ ಶುಕ್ರವಾರ 65 ಮಂದಿ ಕೊರೋನಾ ರೋಗ ಮುಕ್ತರಾಗಿದ್ದಾರೆ. ಮಲಪ್ಪುರಂ – 18, ಕೋಝಿಕ್ಕೋಡು – 10, ಕೊಲ್ಲಂ – 10, ತ್ರಿಶೂರು – 15, ಕೋಟ್ಟಯಂ – 2, ಇಡುಕ್ಕಿ – 5, ಕಣ್ಣೂರು – 1 ಎಂಬಂತೆ ಕೋವಿಡ್ ಮುಕ್ತರಾಗಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 3876 ಆಗಿದೆ. ಇದರಲ್ಲಿ ಚಿಕಿತ್ಸೆ ಪಡೆಯುತ್ತಿರುವರು 1846 ಆಗಿದ್ದು , ಒಟ್ಟು ರೋಗ ಮುಕ್ತರಾದವರು 2006 ಮಂದಿ ಎಂದು ಕೇರಳ ಆರೋಗ್ಯ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇದುವರೆಗೆ ಕೊರೋನಾ ಬಾಧಿಸಿ ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ.