Tuesday, August 16, 2022

Latest Posts

ಕೇರಳದಲ್ಲಿ ಶುಕ್ರವಾರ 2543 ಮಂದಿಗೆ ಕೊರೋನಾ ಪಾಸಿಟಿವ್: 2097 ಜನರಿಗೆ ರೋಗಮುಕ್ತಿ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 157 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 193 ಮಂದಿ ಗುಣಮುಖರಾಗಿದ್ದಾರೆ. 144 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ.
ನೀಲೇಶ್ವರ-15, ದೇಲಂಪಾಡಿ-2, ಕಯ್ಯೂರು-8, ಚೆರ್ವತ್ತೂರು-5, ಉದುಮ-7, ಚೆಮ್ನಾಡು-5, ಪಡನ್ನ-5, ಕಾಞಂಗಾಡು-14, ಮಂಗಲ್ಪಾಡಿ-8, ಚೆಂಗಳ-4, ಪಿಲಿಕೋಡು-4, ಕೋಡೋಂ ಬೇಳೂರು-5, ತೃಕ್ಕರಿಪುರ-15, ಪಳ್ಳಿಕೆರೆ-3, ಕಳ್ಳಾರು-1, ಮೊಗ್ರಾಲ್ ಪುತ್ತೂರು-3, ಕಾಸರಗೋಡು-12, ಮಧೂರು-7, ಅಜಾನೂರು-10, ಎಣ್ಮಕಜೆ-1, ಮಡಿಕೈ-2, ಈಸ್ಟ್ ಎಳೇರಿ-1, ಪೈವಳಿಕೆ-2, ಮಂಜೇಶ್ವರ-4, ಪುತ್ತಿಗೆ-2, ಮೀಂಜ-2, ಬದಿಯಡ್ಕ-2, ಕುಂಬಳೆ-5, ಮುಳಿಯಾರು-1 ಎಂಬಂತೆ ರೋಗ ತಗಲಿದೆ.
ಜಿಲ್ಲೆಯಲ್ಲಿ ಕಣ್ಗಾವಲು ಇರುವ ಒಟ್ಟು ಕೋವಿಡ್ ಬಾಧಿತರ ಸಂಖ್ಯೆ 5484 ಮಂದಿಯಾಗಿದ್ದಾರೆ. ಇದರಲ್ಲಿ ಮನೆಗಳಲ್ಲಿ 4391 ಮತ್ತು ವಿವಿಧ ಕೇಂದ್ರಗಳಲ್ಲಿ 1093 ಮಂದಿ ಇದ್ದಾರೆ. ಹೊಸದಾಗಿ ಸೇರಿಸಲಾದ 216 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 1072 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 712 ಜನರ ಪರೀಕ್ಷಾ ಫಲಿತಾಂಶಗಳನ್ನು ಇನ್ನಷ್ಟೇ
ಪಡೆಯಬೇಕಾಗಿದೆ. 264 ಮಂದಿ ನಿಗಾ ಅವಧಿಯನ್ನು ಪೂರ್ಣಗೊಳಿಸಿರುವರು. 241 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ 126 ಜನರನ್ನು ಬಿಡುಗಡೆ ಮಾಡಲಾಗಿದೆ.
ಕೋವಿಡ್ ಇದುವರೆಗೆ ಜಿಲ್ಲೆಯ 4682 ಜನರಲ್ಲಿ ದೃಢಪಡಿಸಲಾಗಿದೆ. ಈ ಪೈಕಿ 536 ಮಂದಿ ವಿದೇಶದಿಂದ ಬಂದವರು, 387 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಮತ್ತು 3759 ಮಂದಿ ಸಂಪರ್ಕದ ಮೂಲಕ ದೃಢಪಟ್ಟಿದೆ. ಇದುವರೆಗೆ ಕೊರೋನಾ 3406 ಜನರಿಗೆ ನಕಾರಾತ್ಮಕವಾಗಿದೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 34 ಕ್ಕೆ ಏರಿದೆ.
ಜಿಲ್ಲೆಯಲ್ಲಿ 198 ಮಂದಿ ಸೋಂಕಿತರು ಚಿಕಿತ್ಸೆಯ ಬಳಿಕ ಗುಣಮುಖರಾದರು. ಚೆಮ್ನಾಡು 51, ಬೆಳ್ಳೂರು 1, ಚೆಂಗಳ 11, ಚೆರ್ವತ್ತೂರು 2, ಕಳ್ಳಾರು 2, ಕಾಞಂಗಾಡು 2, ಕಾರಡ್ಕ 2, ಕಾಸರಗೋಡು 14, ಕಯ್ಯೂರು ಚೀಮೆನಿ 2, ಕುಂಬ್ಡಾಜೆ 1, ಕುಂಬಳೆ 8, ಮಡಿಕೈ 2, ಮಂಜೇಶ್ವರ 5, ಮೀಂಜ 1, ನೀಲೇಶ್ವರ 14, ಮೊಗ್ರಾಲ್ ಪುತ್ತೂರು 1, ಎಣ್ಮಕಜೆ 1, ಪಳ್ಳಿಕೆರೆ 8, ಪನತ್ತಡಿ 1, ಪುಲ್ಲೂರು ಪೆರಿಯ, 4, ಪುತ್ತಿಗೆ 4, ಪೈವಳಿಕೆ 1, ಉದುಮ 19 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೇರಳದಲ್ಲಿ ಶುಕ್ರವಾರ 2543 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಕೋವಿಡ್ ಮಾಹಿತಿ ವಿವರಿಸಲ್ಪಟ್ಟಿದೆ. 2097 ಬಾಧಿತರು ಗುಣಮುಖರಾಗಿದ್ದಾರೆ. ಸಂಪರ್ಕ ಸೋಂಕಿತ ಕೋವಿಡ್ ಪ್ರಕರಣಗಳ ಸಂಖ್ಯೆ 2260 ಆಗಿದೆ. ಅಲ್ಲದೆ ಸರಕಾರವು ಶುಕ್ರವಾರ 7 ಕೋವಿಡ್ ಸಾವುಗಳನ್ನು ದೃಢಪಡಿಸಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗಿನ ಕೋವಿಡ್ ಸಾವಿನ ಸಂಖ್ಯೆ ಒಟ್ಟು 274 ಕ್ಕೆ ತಲುಪಿದೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ ಹಾಟ್‍ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಿದೆ. ಇದೀಗ ರಾಜ್ಯಾದ್ಯಂತ 599 ಹಾಟ್‍ಸ್ಪಾಟ್‍ಗಳಿವೆ.
ಕೇರಳದಲ್ಲಿ 2543 ಪಾಸಿಟಿವ್ ಬಾಧಿತರನ್ನು ಗುರುತಿಸಲಾಗಿದೆ. ತಿರುವನಂತಪುರ 532 , ಮಲಪ್ಪುರಂ 298, ಆಲಪ್ಪುಳ 286, ಎರ್ನಾಕುಳಂ 207, ತೃಶೂರು 189, ಕಲ್ಲಿಕೋಟೆ 174, ಕಾಸರಗೋಡು 157, ಕೊಲ್ಲಂ 156, ಕಣ್ಣೂರು 135, ಪಾಲಕ್ಕಾಡು 127, ಕೋಟ್ಟಾಯಂ 126, ಪತ್ತನಂತಿಟ್ಟ 88 , ಇಡುಕ್ಕಿ 49 ಮತ್ತು ವಯನಾಡು 19 ಜನರಿಗೆ ಸೋಂಕು ಪತ್ತೆಯಾಗಿದೆ.
ಹೆಚ್ಚುತ್ತಿರುವ ಕೋವಿಡ್ ವ್ಯಾಪಕತೆಯ ಮಧ್ಯೆ ರಾಜ್ಯದಲ್ಲಿ 2097 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 544, ಕೊಲ್ಲಂ 93, ಪತ್ತನಂತಿಟ್ಟ 49, ಆಲಪ್ಪುಳ 150, ಕೋಟ್ಟಾಯಂ 82, ಇಡುಕ್ಕಿ 36, ಎರ್ನಾಕುಳಂ 155, ತೃಶೂರು 110, ಪಾಲಕ್ಕಾಡು 93, ಮಲಪ್ಪುರಂ 345, ಕಲ್ಲಿಕೋಟೆ 106 ವಯನಾಡು 7, ಕಣ್ಣೂರು 134, ಕಾಸರಗೋಡು 193 ಮಂದಿಯ ಪರೀಕ್ಷಾ ಫಲಿತಾಂಶ ನೆಗೆಟಿವ್ ಆಗಿದೆ.
ಈ ಮಧ್ಯೆ 52 ಮಂದಿ ಆರೋಗ್ಯ ಕಾರ್ಯಕರ್ತರಲ್ಲೂ ಕೋವಿಡ್ ದೃಢಪಟ್ಟಿದೆ. ತಿರುವನಂತಪುರ 22, ಮಲಪ್ಪುರಂ ಮತ್ತು ಕಣ್ಣೂರು ತಲಾ 6, ಎರ್ನಾಕುಳಂ 5, ಪಾಲಕ್ಕಾಡು ಮತ್ತು ಕಲ್ಲಿಕೋಟೆ ತಲಾ 4, ಆಲಪ್ಪುಳ ಮತ್ತು ತೃಶೂರು ತಲಾ 2, ಕಾಸರಗೋಡು ಜಿಲ್ಲೆಯಲ್ಲಿ ಓರ್ವ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಓಣಂ ಹಬ್ಬಾಚರಣೆಯ ಮಧ್ಯೆ ಹೆಚ್ಚುತ್ತಿದೆ ಕೊರೋನಾ!
ಓಣಂ ಹಬ್ಬಾಚರಣೆಗೆ ಕೇರಳ ಸರಕಾರವು ಕಾನೂನು ಸಡಿಲಿಕೆಗೆ ಆದೇಶ ನೀಡಿರುವ ಬೆನ್ನಿಗೇ ರಾಜ್ಯಾದ್ಯಂತ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ನಿರ್ಬಂಧಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಸರಕಾರವು ಇನ್ನಷ್ಟು ಸಡಿಲಿಕೆ ಮಾಡುತ್ತಿದೆ ಎಂಬ ಮಾತು ಕೇಳಿಬಂದಿದೆ. ಆದರೆ ಕೇರಳದಲ್ಲಿ ಸಂಪರ್ಕದ ಮೂಲಕ ಕೋವಿಡ್ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದೆ. ರೋಗದ ಪ್ರಮಾಣ ಹೆಚ್ಚಿರುವ ತಿರುವನಂತಪುರ ಜಿಲ್ಲೆಯಲ್ಲಿ ಮತ್ತೆ ಸೋಂಕು ಹೆಚ್ಚುತ್ತಿದೆ. ರಸ್ತೆಗಳಲ್ಲಿ ಜನಸಂದಣಿ ಹೆಚ್ಚು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಭಾರೀ ಸಮಸ್ಯೆ ತಲೆದೋರಬಹುದು ಎಂದು ಆತಂಕಪಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!