Thursday, August 18, 2022

Latest Posts

ಕೇರಳದಲ್ಲಿ ಶುಕ್ರವಾರ 6201 ಮಂದಿಗೆ ರೋಗಮುಕ್ತಿ: 5804 ಜನರಿಗೆ ಕೋವಿಡ್ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಶುಕ್ರವಾರ 5804 ಮಂದಿಗೆ ಕೊರೋನಾ ಸೋಂಕು ದೃಢಪಡಿಸಲಾಗಿದೆ. ರಾಜ್ಯದಲ್ಲಿ 4,34,730 ಮಂದಿ ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೆ ಶುಕ್ರವಾರ 6201 ಮಂದಿ ಪೂರ್ಣವಾಗಿ ರೋಗಮುಕ್ತರಾದರು. ಆದರೆ 26 ಮಂದಿ ಸೋಂಕಿನ ಕಾರಣದಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆಯು ತಿಳಿಸಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1822 ಕ್ಕೆ ಏರಿಕೆಯಾಗಿದೆ. ಸೋಂಕು ಪತ್ತೆಯಾದ 77,390 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಕಂಡುಬಂದವರಲ್ಲಿ 118 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4988 ಜನರಿಗೆ ಸೋಂಕು ತಗಲಿತು. 643 ಜನರ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ. 55 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ.
ಕಲ್ಲಿಕೋಟೆ 799, ಎರ್ನಾಕುಳಂ 756, ತೃಶೂರು 677, ಮಲಪ್ಪುರಂ 588, ಕೊಲ್ಲಂ 489, ಆಲಪ್ಪುಳ 468, ತಿರುವನಂತಪುರ 439, ಪಾಲಕ್ಕಾಡು 438, ಕೋಟ್ಟಾಯಂ 347, ಕಣ್ಣೂರು 240, ಪತ್ತನಂತ್ತಿಟ್ಟ 189, ಇಡುಕ್ಕಿ 187, ವಯನಾಡು 106, ಕಾಸರಗೋಡು 81 ಎಂಬಂತೆ ಸೋಂಕು ಬಾಧಿಸಿದೆ.
ಚಿಕಿತ್ಸೆಗೆ ಒಳಗಾದ 6201 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂಬುದನ್ನು ದೃಢಪಡಿಸಲಾಗಿದೆ. ತಿರುವನಂತಪುರ 727, ಕೊಲ್ಲಂ 613, ಪತ್ತನಂತ್ತಿಟ್ಟ 89, ಆಲಪ್ಪುಳ 415, ಕೋಟ್ಟಾಯಂ 317, ಇಡುಕ್ಕಿ 78, ಎರ್ನಾಕುಳಂ 707, ತೃಶೂರು 866, ಪಾಲಕ್ಕಾಡು 338, ಮಲಪ್ಪುರಂ 522, ಕಲ್ಲಿಕೋಟೆ 781, ವಯನಾಡು 160, ಕಣ್ಣೂರು 431, ಕಾಸರಗೋಡು 157 ಎಂಬಂತೆ ಗುಣಮುಖರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!