ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೇರಳದಲ್ಲಿ ಶುಕ್ರವಾರ 7283 ಮಂದಿಗೆ ಕೋವಿಡ್ ಸೋಂಕು: 6767 ಜನರಿಗೆ ರೋಗಮುಕ್ತಿ

ಕಾಸರಗೋಡು: ಕೇರಳದಲ್ಲಿ ಕೊರೋನಾದ ತೀವ್ರ ಸ್ಥಿತಿ ಮುಂದುವರಿದಿದ್ದು,  ಶುಕ್ರವಾರ 7283 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 51,836 ಮಾದರಿಗಳನ್ನು ಮಾತ್ರ ಪರೀಕ್ಷಿಸಲಾಗಿದೆ. ಚಿಕಿತ್ಸೆಯಲ್ಲಿರುವ ಒಟ್ಟು ರೋಗಿಗಳ ಸಂಖ್ಯೆಯು 95,008 ಕ್ಕೆ ಏರಿದೆ. ಈ ವರೆಗೆ 2,28,998 ಮಂದಿ ಗುಣಮುಖರಾಗಿರುವರು.
ಇದೇ ವೇಳೆ ಮಲಪ್ಪುರಂ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇಲ್ಲಿ 1025 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕಲ್ಲಿಕೋಟೆ 970, ತೃಶೂರು 809, ಪಾಲಕ್ಕಾಡು 648, ಎರ್ನಾಕುಳಂ 606, ತಿರುವನಂತಪುರ 595, ಆಲಪ್ಪುಳ 563, ಕೋಟ್ಟಾಯಂ 432, ಕೊಲ್ಲಂ 418, ಕಣ್ಣೂರು 405, ಪತ್ತನಂತ್ತಿಟ್ಟ 296, ಕಾಸರಗೋಡು 234, ವಯನಾಡು 158, ಇಡುಕ್ಕಿ 124 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6767 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 780, ಕೊಲ್ಲಂ 767, ಪತ್ತನಂತ್ತಿಟ್ಟ 257, ಆಲಪ್ಪುಳ 181, ಕೋಟ್ಟಾಯಂ 246, ಇಡಕ್ಕಿ 53, ಎರ್ನಾಕುಳಂ 843, ತೃಶೂರು 831, ಪಾಲಕ್ಕಾಡು 322, ಮಲಪ್ಪುರಂ 432, ಕಲ್ಲಿಕೋಟೆ 1154, ವಯನಾಡು 155, ಕಣ್ಣೂರು 440, ಕಾಸರಗೋಡು 306 ಎಂಬಂತೆ ಸೋಂಕು ಮುಕ್ತರಾದರು. 2,28,998 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ಕೋವಿಡ್ ಕಾರಣದಿಂದ ಶುಕ್ರವಾರ 24 ಮಂದಿ ಮೃತಪಟ್ಟರು. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1113 ಕ್ಕೆ ಏರಿಕೆಯಾಗಿದೆ. ಅಲ್ಲದೆ ಶುಕ್ರವಾರ ಸುಮಾರು 250 ಮಂದಿ ಆರೋಗ್ಯ ವಲಯದ ಕಾರ್ಯಕರ್ತರು ಕೊರೋನಾ ವೈರಸ್ ಸೋಂಕಿಗೆ ಒಳಗಾದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss