Tuesday, July 5, 2022

Latest Posts

ಕೇರಳದಲ್ಲಿ ಸೋಮವಾರ 449 ಮಂದಿಗೆ ಕೊರೋನಾ 

ಕಾಸರಗೋಡು: ಕೇರಳದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದ್ದು , ತೀವ್ರ ಕಳವಳಕ್ಕೆ ಕಾರಣವಾಗುತ್ತಿದೆ. ನೀಲೇಶ್ವರ ನಗರಸಭೆಯ ಆರೋಗ್ಯ ಕಾರ್ಯಕರ್ತ ಸಹಿತ ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಅಲ್ಲದೆ 9 ಮಂದಿ ಗುಣಮುಖರಾಗಿದ್ದಾರೆ 7 ಮಂದಿ ವಿದೇಶದಿಂದಲೂ, ಒಬ್ಬರು ಇತರ ರಾಜ್ಯದಿಂದಲೂ, ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ಖತ್ತರ್‍ನಿಂದ ಬಂದ ಕುಂಬಳೆ ಪಂಚಾಯತ್‍ನ 58 ವರ್ಷದ ವ್ಯಕ್ತಿ, ದುಬೈಯಿಂದ ಬಂದ 30 ವರ್ಷದ ಮೊಗ್ರಾಲ್ ಪುತ್ತೂರು ನಿವಾಸಿ, 34 ವರ್ಷದ ಚೆಮ್ನಾಡ್ ಪಂಚಾಯತ್ ನಿವಾಸಿ, 22 ವರ್ಷದ ಕಾಸರಗೋಡು ನಗರಸಭೆ ನಿವಾಸಿ, 35 ವರ್ಷದ ಮುಳಿಯಾರು ಪಂಚಾಯತ್ ನಿವಾಸಿ, ಓಮಾನ್ ನಿಂದ ಬಂದ 28 ವರ್ಷದ ಕಾಸರಗೋಡು ನಗರಸಭೆ ನಿವಾಸಿ, ಸೌದಿಯಿಂದ ಬಂದ 21 ವರ್ಷದ ಚೆಂಗಳ ಪಂಚಾಯತ್ ನಿವಾಸಿಗೆ ರೋಗ ಬಾಧಿಸಿದೆ.
ಬೆಂಗಳೂರಿನಿಂದ ಬಂದ 35 ವರ್ಷದ ಕುಂಬಳೆ ಪಂಚಾಯತ್ ನಿವಾಸಿಗೆ ರೋಗ ತಗುಲಿದೆ.
ನಿಲೇಶ್ವರ ನಗರಸಭೆಯ ಆರೋಗ್ಯ ಕಾರ್ಯಕರ್ತ 54 ವರ್ಷದ ಕರಿವೆಳ್ಳೂರು ಪಂಚಾಯತ್ ನಿವಾಸಿಗೆ ರೋಗ ಬಾಧಿಸಿದೆ.
ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಞಂಗಾಡು ನಗರಸಭೆ ನಿವಾಸಿಗಳಾದ 25 ವರ್ಷದ ವ್ಯಕ್ತಿ ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳು, ಉದಯಗಿರಿ ಸಿ.ಎಫ್.ಎಲ್.ಟಿ.ಸಿ. ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ವರ್ಷದ ಬೇಡಡ್ಕ ಪಂಚಾಯತ್ ನಿವಾಸಿ, ತಲಶ್ಶೇರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ವರ್ಷದ ಪಳ್ಳಿಕೆರೆ ನಿವಾಸಿ, ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ಕುಂಬಳೆ ಪಂಚಾಯತ್ ನಿವಾಸಿ, 40 ವರ್ಷದ ಮೀಂಜ ಪಂಚಾಯತ್ ನಿವಾಸಿ, ಪಡನ್ನಕ್ಕಾಡು ಕೋವಿಡ್ ಚಿಕಿತ್ಸೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ವರ್ಷದ ನೀಲೇಶ್ವರ ನಗರಸಭೆ ನಿವಾಸಿ, 31 ವರ್ಷದ ಅಜಾನೂರು ಪಂಚಾಯತ್ ನಿವಾಸಿಗಳು ಗುಣಮುಖರಾದವರು.
ಕೇರಳದಲ್ಲಿ 449 ಮಂದಿಗೆ ಕೋವಿಡ್ ಸೋಂಕು
ರಾಜ್ಯದಲ್ಲಿ ಸೋಮವಾರ 449 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢಿಕರಿಸಲಾಗಿದೆ. 162 ಮಂದಿ ಗುಣಮುಖರಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಆಲಪ್ಪುಳ-119, ಪಾಲ್ಘಾಟ್-19, ಕಾಸರಗೋಡು-9, ಎರ್ನಾಕುಳಂ-15, ಮಲಪ್ಪುರಂ-47, ತಿರುವನಂತಪುರ-63, ಪತ್ತನಂತಿಟ್ಟ-47, ತೃಶ್ಶೂರು-9, ವಯನಾಡು-14, ಕಣ್ಣೂರು-44, ಇಡುಕ್ಕಿ-4, ಕೋಟ್ಟಯಂ-10, ಕೊಲ್ಲಂ-33, ಕಲ್ಲಿಕೋಟೆ-16 ಎಂಬಂತೆ ರೋಗ ಬಾಧಿಸಿದೆ.
ಪಾಲ್ಘಾಟ್-25, ಆಲಪ್ಪುಳ-7, ಕಾಸರಗೋಡು-9, ಎರ್ನಾಕುಳಂ-12, ಮಲಪ್ಪುರಂ-28, ತಿರುವನಂತಪುರ-3, ಪತ್ತನಂತಿಟ್ಟ-2, ತೃಶ್ಶೂರು-14, ವಯನಾಡು-16, ಕಣ್ಣೂರು-20, ಕೋಟ್ಟಯಂ-12, ಕೊಲ್ಲಂ-10, ಕಲ್ಲಿಕೋಟೆ-8 ಎಂಬಂತೆ ಗುಣಮುಖರಾಗಿದ್ದಾರೆ.
ಕೇರಳದಲ್ಲಿ 144 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 140 ಮಂದಿ ವಿದೇಶದಿಂದಲೂ, 64 ಮಂದಿ ಇತರ ರಾಜ್ಯಗಳಿಂದಲೂ ಬಂದವರಿಗೆ ಸೋಂಕು ಬಾಧಿಸಿದೆ. 18 ಮಂದಿಗೆ ರೋಗ ಹರಡಲು ಕಾರಣ ತಿಳಿದು ಬಂದಿಲ್ಲ. 5 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ದೃಢೀಕರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss