Tuesday, August 16, 2022

Latest Posts

ಕೇರಳದಲ್ಲಿ ಸೋಮವಾರ 5983 ಮಂದಿ ಗುಣಮುಖ: 3593 ಜನರಿಗೆ ಕೊರೋನಾ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಸೋಮವಾರ 3593 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. 5983 ಮಂದಿ ಚಿಕಿತ್ಸೆ ಪೂರ್ಣಗೊಳಿಸಿ ಗುಣಮುಖರಾಗಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ, ಕೇರಳದಲ್ಲಿ 79,410 ಮಂದಿ ಈಗಲೂ ಚಿಕಿತ್ಸೆಯಲ್ಲಿದ್ದಾರೆ. ಈ ವರೆಗೆ 4,08,460 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ. ರಾಜ್ಯದಲ್ಲಿ ಸೋಮವಾರ 22 ಮಂದಿ ಮೃತಪಟ್ಟಿದ್ದು , ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1714 ಏರಿಕೆಯಾಗಿದೆ. ಸೋಂಕು ದೃಢಪಟ್ಟವರಲ್ಲಿ 61 ಮಂದಿ ರಾಜ್ಯದ ಹೊರಗಿಂದ ಬಂದವರಾಗಿದ್ದಾರೆ. ಸಂಪರ್ಕದ ಮೂಲಕ 3070 ಜನರಿಗೆ ರೋಗ ತಗಲಿದೆ. 409 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 53 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ.
ಕೇರಳದಲ್ಲಿ 3593 ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 548, ಕಲ್ಲಿಕೋಟೆ 479, ಎರ್ನಾಕುಳಂ 433, ತೃಶೂರು 430, ಆಲಪ್ಪುಳ 353, ತಿರುವನಂತಪುರ 324, ಕೊಲ್ಲಂ 236, ಪಾಲಕ್ಕಾಡು 225, ಕೋಟ್ಟಾಯಂ 203, ಕಣ್ಣೂರು 152, ಕಾಸರಗೋಡು 75, ವಯನಾಡು 50, ಪತ್ತನಂತ್ತಿಟ್ಟ 43, ಇಡುಕ್ಕಿ 42 ಎಂಬಂತೆ ಸೋಂಕು ಬಾಧಿಸಿದೆ.
ಚಿಕಿತ್ಸೆಯಲ್ಲಿರುವ 5983 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 452, ಕೊಲ್ಲಂ 454, ಪತ್ತನಂತ್ತಿಟ್ಟ 147, ಆಲಪ್ಪುಳ 792, ಕೋಟ್ಟಾಯಂ 423, ಇಡುಕ್ಕಿ 49, ಎರ್ನಾಕುಳಂ 827, ತೃಶೂರು 904, ಪಾಲಕ್ಕಾಡು 429, ಮಲಪ್ಪುರಂ 560, ಕಲ್ಲಿಕೋಟೆ 618, ವಯನಾಡು 104, ಕಣ್ಣೂರು 133, ಕಾಸರಗೋಡು 91 ಎಂಬಂತೆ ಗುಣಮುಖರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss