Wednesday, July 6, 2022

Latest Posts

ಕೇರಳದಲ್ಲಿ ಸೋಮವಾರ 7836 ಮಂದಿಗೆ ರೋಗಮುಕ್ತಿ: 5930 ಜನರಲ್ಲಿ ಕೋವಿಡ್ ಪತ್ತೆ

ಕಾಸರಗೋಡು: ಕೇರಳದಲ್ಲಿ ಸೋಮವಾರ 5930 ಮಂದಿಗೆ ಕೋವಿಡ್ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 4767 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ರಾಜ್ಯದಲ್ಲಿ 7836 ಮಂದಿಗೆ ರೋಗಮುಕ್ತಿಯಾಗಿದೆ. ಕಲ್ಲಿಕೋಟೆ 869, ಮಲಪ್ಪುರಂ 740, ತೃಶೂರು 697, ತಿರುವನಂತಪುರ 629, ಆಲಪ್ಪುಳ 618, ಎರ್ನಾಕುಳಂ 480, ಕೋಟ್ಟಾಯಂ 382, ಕೊಲ್ಲಂ 343, ಕಾಸರಗೋಡು 295, ಪಾಲಕ್ಕಾಡು 288, ಕಣ್ಣೂರು 274, ಪತ್ತನಂತ್ತಿಟ್ಟ 186, ಇಡುಕ್ಕಿ 94, ವಯನಾಡು 35 ಎಂಬಂತೆ ಸೋಂಕು ಬಾಧಿಸಿದೆ.
ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಕೇರಳದಲ್ಲಿ ಕಳವಳ ಮುಂದುವರಿದಿದೆ. ರೋಗ ದೃಢಪಟ್ಟ 5930 ಜನರಲ್ಲಿ 48 ಮಂದಿ ವಿದೇಶಗಳಿಂದ ಮತ್ತು ಇತರ ರಾಜ್ಯಗಳಿಂದ ಬಂದ 86 ಜನರು ಸೇರಿದ್ದಾರೆ. ಸಂಪರ್ಕದ ಮೂಲಕ 4767 ಜನರಿಗೆ ಸೋಂಕು ಬಾಧಿಸಿದೆ. 195 ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕಳೆದ 24 ಗಂಟೆಗಳಲ್ಲಿ 38,259 ಮಾದರಿಗಳನ್ನು ಪರೀಕ್ಷಿಸಲಾಯಿತು. ಪ್ರಕರಣಗಳ ಸಂಖ್ಯೆಯ ಹೆಚ್ಚಳದೊಂದಿಗೆ ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ 664 ಕ್ಕೆ ಏರಿದೆ.
ಕೋವಿಡ್ ಪ್ರಕರಣಗಳ ಹೆಚ್ಚಳದ ಮಧ್ಯೆ ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2,81,413 ಜನರನ್ನು ಕ್ವಾರಂಟೈನ್ ಮಾಡಲಾಗಿದೆ 2,53,104 ಮನೆ / ಸಾಂಸ್ಥಿಕ ಸಂಪರ್ಕತಡೆಯಲ್ಲಿ ಮತ್ತು 28,309 ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 3075 ಮಂದಿಯನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ 94,388 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 1,99,634 ಮಂದಿ ಈ ವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ರಾಜ್ಯದಲ್ಲಿ ಸೋಮವಾರ 22 ಮಂದಿ ಕೊರೋನಾ ಬಾಧಿಸಿ ಮೃತಪಟ್ಟಿದ್ದು , ಒಟ್ಟು ಸಾವಿನ ಸಂಖ್ಯೆ 1025 ಕ್ಕೆ ಏರಿಕೆಯಾಗಿದೆ.
ಈ ಮಧ್ಯೆ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದ 7836 ಮಂದಿ ಸೋಂಕುಮುಕ್ತರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss