ಹೊಸದಿಗಂತ ಆನ್ಲೈನ್ ಡೆಸ್ಕ್:
ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರಿಗೆ ಬೆಂಬಲ ಸೂಚಿಸಲು ಇಲ್ಲೊಬ್ಬ ಯುವಕ ಕೇರಳದ ತಿರುವನಂತಪುರಂನಿಂದ ಕಾಶ್ಮೀರದವರೆಗೆ ಸೈಕ್ಲಿಂಗ್ ಹೊರಟಿದ್ದಾನೆ.
ಮೂಲತಃ ತಿರುವನಂತಪುರಂನ ನಿವಾಸಿಯೇ ಆಗಿರುವ ಜಿಬಿನ್ ಜಾರ್ಜ್, ಅಟ್ಟಿಂಗಲ್ನಲ್ಲಿರುವ ರಾಜಧಾನಿ ಹೊಟೇಲ್ ಮ್ಯಾನೇಜ್ಮೆಂಟ್ ಕೆಟರಿಂಗ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪದವಿ ಓದುತ್ತಿದ್ದಾರೆ. ತನ್ನ ಪ್ರಯಾಣದ ಹಾದಿಯುದ್ದಕ್ಕೂ ರೈತರ ಸಮಸ್ಯೆಗಳ ಕುರಿತಂತೆ ಸಾರ್ವಜನಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಜಾರ್ಜ್ ಉದ್ದೇಶವಾಗಿದೆ. ಪಶ್ಚಿಮ ಕರಾವಳಿಯ ಹಾದಿಯಲ್ಲಿ ಗೋವಾ ತಲುಪಿ, ಬಳಿಕ ಮಹಾರಾಷ್ಟ್ರದಿಂದ ಆಚೆಗೆ ಬೇರೆ ರಾಜ್ಯಗಳನ್ನು ಹಾದು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರತ್ತ ಧಾವಿಸುವುದಾಗಿ ಜಾರ್ಜ್ ಹೇಳಿಕೊಂಡಿದ್ದಾರೆ.