Tuesday, July 5, 2022

Latest Posts

ಕೇರಳದಿಂದ ಹಾಲು ಖರೀದಿಯನ್ನು ನಿಲ್ಲಿಸಿದ ತಮಿಳುನಾಡು: ‘ಮಿಲ್ಮ’ಗೆ ಬಿಗ್ ಶಾಕ್ !

ಕೋಝಿಕ್ಕೋಡು: ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ವ್ಯಾಪಕವಾಗುತ್ತಿದ್ದಂತೆ ಕೇರಳದಿಂದ ಹಾಲು ಖರೀದಿಸುವುದನ್ನು ತಮಿಳುನಾಡು ಸರಕಾರವು ನಿರ್ಬಂಧಿಸಿದೆ.
ಕೇರಳದಲ್ಲಿ ಕೊರೊನಾ ಬಾಧಿತರ ಸಂಖ್ಯೆ ಹೆಚ್ಚಳವಾಗಿರುವುದರಿಂದ ತಮಿಳುನಾಡು ಸರಕಾರವು ಈ ನೀರ್ಧಾರವನ್ನು ತಳೆದಿದೆ. ಇದರೊಂದಿಗೆ ಮಿಲ್ಮ ಮಲಬಾರ್ ವಲಯ ವು ಸಂಕಷ್ಟವನ್ನು ಅನುಭವಿಸಲಿದೆ. ಹೈನುಗಾರರಿಂದ ಹಾಲು ಖರೀದಿಸಿ ಶೇಖರಿಸುವುದು ಕಷ್ಟಸಾಧ್ಯ ಎಂದು ಮಲಬಾರ್ ವಲಯ ಯೂನಿಯನ್ ತಿಳಿಸಿದೆ. ಹಾಲು ಹುಡಿ ತಯಾರಿಗೆ ಪ್ರತೀ ವರ್ಷ 2 ಲಕ್ಷ ಲೀಟರ್ ಹಾಲು ಕೇರಳದಿಂದ ತಮಿಳುನಾಡಿಗೆ ಸಾಗಾಟವಾಗುತ್ತಿದೆ.
ಇದೇ ವೇಳೆ ತರಕಾರಿ ಸಹಿತ ಅವಶ್ಯ ವಸ್ತುಗಳನ್ನು ತಮಿಳುನಾಡು ಸರಕಾರವು ರಾಜ್ಯಕ್ಕೆ ನೀಡಲಿದೆ. ಆದರೆ ವಾಹನಗಳನ್ನು ಗಡಿಯಲ್ಲಿ ಅಣುಮುಕ್ತಗೊಳಿಸಲು ತೀರ್ಮಾನಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss