Friday, July 1, 2022

Latest Posts

ಕೇರಳದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೂ ಬೆಂಗಳೂರಿನ ಡ್ರಗ್‌ ಮಾಫಿಯಾಕ್ಕೂ ಲಿಂಕ್?

ಕೊಚ್ಚಿ: ಕೇರಳದ ಚಿನ್ನದ ಕಳ್ಳ ಸಾಗಾಣಿಕೆ ಪ್ರಕರಣಕ್ಕೂ ಬೆಂಗಳೂರಿನ ಡ್ರಗ್‌ ಮಾಫಿಯಾ ಪ್ರಕರಣಕ್ಕೂ ನಂಟಿದೆ ಎಂದು ಜಾರಿ ನಿರ್ದೇಶನಾಲಯ ಸಂಶಯ ವ್ಯಕ್ತಪಡಿಸಿದೆ.
ಈ ಬಗ್ಗೆ ಬುಧವಾರ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಇಡಿ,  ಬೆಂಗಳೂರು ಡ್ರಗ್‌ ಮಾಫಿಯಾದ ಆರೋಪಿಗಳು ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಹಾಯ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದೆ.
ಜಾರಿ ನಿರ್ದೇಶನಾಲಯ ಅಕ್ರಮ ಹಣ ಸಾಗಾಣಿಕೆ ಕಾಯಿದೆಯಡಿಯಲ್ಲಿ ಈಗಾಗಲೇ ಬಂಧಿತರಾಗಿದ್ದ ಸರಿತಾ ಪಿಎಸ್ ಮತ್ತು ಸ್ವಪ್ನಾ ಸುರೇಶ್ ಸೇರಿ ಚಿನ್ನ ಕಳ್ಳಸಾಗಣೆ ಪ್ರಕರಣದ ಮೂವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿದೆ.
ಈ ಸಂದರ್ಭ ಹೆಚ್ಚಿನ ತನಿಖೆಯಲ್ಲಿ ಬೆಂಗಳೂರಿನ ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣದ ಆರೋಪಿಗಳು ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿರುವ ಸಾಧ್ಯತೆ ಇದೆ ಎಂದು ಇದಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಈ ಕುರಿತು ಜಾರಿ ನಿರ್ದೇಶನಾಲಯವು ಡ್ರಗ್‌ ಮಾಫಿಯಾ ಪ್ರಕರಣದ ವಿವರವನ್ನು ಹಂಚಿಕೊಳ್ಳಲು ಬೆಂಗಳೂರಿನ ಎನ್‌ಸಿಬಿಗೆ ಮನವಿ ಮಾಡಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ 20ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಬೇಕಿದೆ ಎಂದು ಜಾರಿ ನಿರ್ದೇಶನಾಲಯ ವಿಶೇಷ ಕೋರ್ಟ್‌ಗೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss