Thursday, August 11, 2022

Latest Posts

ಕೇರಳದ ಪಿಣರಾಯಿ ವಿಜಯನ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ತಿರುವನಂತಪುರ: ಕೊರೋನಾ ನಡುವೆ ಕೇರಳ ವಿಧಾನಸಭೆಯ ಒಂದು ದಿನದ ಅಧಿವೇಶನ ಸೋಮವಾರ ಬೆಳಗ್ಗೆ ಆರಂಭವಾಗುತ್ತಿದ್ದಂತೆ ಯುಡಿಎಫ್ ಪಕ್ಷವು ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತು.
ದೇಶಾದ್ಯಂತ ಸುದ್ದಿಯಾದ ರಾಜತಾಂತ್ರಿಕ ಆಶ್ರಯದಲ್ಲಿ ನಡೆದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಿಎಂ ಕಚೇರಿಯ ಶಾಮೀಲಾತಿ ಆರೋಪ ಹಾಗೂ ಬಡವರಿಗಾಗಿನ ಲೈಫ್ ಮಿಷನ್ ಗೃಹ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಸಹಿತ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸ್ಪೀಕರ್ ಬೆಳಗ್ಗೆ ಅವಕಾಶ ನೀಡಿ ಈ ವಿಷಯದ ಮೇಲೆ ಚರ್ಚಿಸಲು 5 ಗಂಟೆಗಳ ಕಾಲ ಅವಕಾಶ ನೀಡಿದರು.
ಒಟ್ಟು 140 ಸದಸ್ಯರ ಬಲದ ಸದನದಲ್ಲಿ ಎಲ್‍ಡಿಎಫ್ ನ 91 ಸದಸ್ಯರಿದ್ದರೆ, ಯುಡಿಎಫ್‍ಗೆ 45 ಸದಸ್ಯರ ಬೆಂಬಲ ಮಾತ್ರ ಇರುವುದರಿಂದ ಅವಿಶ್ವಾಸ ನಿರ್ಣಯ ಸರಕಾರಕ್ಕೆ ಯಾವುದೇ ಅಪಾಯವೊಡ್ಡುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss