Tuesday, September 22, 2020
Tuesday, September 22, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕೇರಳದ ಮೂನಾರ್‌ನಲ್ಲಿ ಭಾರೀ ಭೂ ಕುಸಿತ: 15 ಸಾವು, 80ಕ್ಕೂ ಹೆಚ್ಚು ಮಂದಿ ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ

sharing is caring...!

ತಿರುವನಂತಪುರ: ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮೂನ್ನಾರ್‌ನ ರಾಜಮಲೈನಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಮಾದರಿಯಲ್ಲಿ ಪೆಟ್ಟಿಮುಡಿ ಬೆಟ್ಟ ಶುಕ್ರವಾರ ಮುಂಜಾನೆ ಕುಸಿದು ಬಿದ್ದು 15 ಮಂದಿ ಮೃತಪಟ್ಟು ಅವಶೇಷಗಳಡಿಯಲ್ಲಿ ಸುಮಾರು 80ರಷ್ಟು ಮಂದಿ ಸಿಲುಕಿರುವ ಭೀತಿ ವ್ಯಕ್ತವಾಗಿದೆ.
ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಕಟ್ಟಡ ಧರೆಗುರುಳಿ ಸುಮಾರು ೮೦ರಷ್ಟು ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದುವರೆಗೆ 15 ಮಂದಿಯ ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ ಎಂದು ಕೇರಳ ಸರಕಾರ ತಿಳಿಸಿದೆ.
ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಹೊರತೆಗೆಯಲು ಸಾಧ್ಯವಾಗುತ್ತಿಲ್ಲ.
ಇದುವರೆಗೆ 7ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿಹಾಕಿಕೊಂಡವರಲ್ಲಿ ಬಹುತೇಕರು ಕಣ್ಣನ್ ದೇವನ್ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ.
ಶುಕ್ರವಾರ ಮುಂಜಾನೆ ಈ ಘೋರ ದುರಂತ ಸಂಭವಿಸಿದ್ದು , ನಿದ್ದೆಯಲ್ಲಿದ್ದ ಜನರಿಗೆ ಬೆಟ್ಟ ಕುಸಿದು ಬೀಳುವಾಗ ಎದ್ದು ಓಡಿಹೋಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ಭಾರೀ ಮಳೆಗೆ ಪ್ರವಾಹ ಉಂಟಾಗಿ ಪೆರಿಯವರ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ರಕ್ಷಣಾ ಪಡೆಗಳಿಗೆ ಸ್ಥಳಕ್ಕೆ ತಲುಪಲು ಕೂಡ ಸಾಧ್ಯವಾಗುತ್ತಿಲ್ಲ. ದುರಂತ ಸಂಭವಿಸಿದ ಬಳಿಕ ಇಡೀ ಪ್ರದೇಶ ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದು ಸಂಪರ್ಕ ಜಾಲಗಳು ಕಡಿತವಾಗಿವೆ. ಕೆಲವು ದುರಂತದಿಂದ ಪಾರಾದ ಮಂದಿ ಅರಣ್ಯ ಇಲಾಖೆಗೆ ತಿಳಿಸಿದ್ದರಿಂದ ,ಸುಮಾರು ೫ಗಂಟೆ ಬಳಿಕವೇ ದುರಂತ ಹೊರಜಗತ್ತಿನ ಅರಿವಿಗೆ ಬಂದಿದೆ.ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿಗಳು, ಎನ್ ಡಿಆರ್ ಎಫ್, ಕಂದಾಯ ಇಲಾಖೆ ಅಧಿಕಾರಿಗಳು, ಎಸ್ಟೇಟ್ ಕಾರ್ಮಿಕರು ಮತ್ತು ಪೊಲೀಸರು ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜಿಲ್ಲಾಕಾರಿ ಎಚ್.ದಿನೇಶನ್ ಅವರು ಮಾತನಾಡಿ, ರಕ್ಷಣಾ ಸಿಬ್ಬಂದಿಗಳನ್ನು ಪೆಟ್ಟುಮುಡಿಗೆ ಕಳುಹಿಸಲಾಗಿದ್ದು ಅಲ್ಲಿ ಜನರನ್ನು ಹುಡುಕುವ ಮತ್ತು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ತಕ್ಷಣವೇ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಪಂಚಾಯತ್ ಅಧ್ಯಕ್ಷ ಮುನ್ನಾರ್ ಪಂಚಾಯತ್ ಅಧ್ಯಕ್ಷ ಕರುಪ್ಪು ಸ್ವಾಮಿ ಹೇಳುವಂತೆ ಇದೇ ಮೊದಲ ಬಾರಿಗೆ ಇಲ್ಲಿ ಈ ರೀತಿಯ ದುರಂತ ಸಂಭವಿಸಿದೆ.
ಹೆಲಿಕಾಪ್ಟರ್ ನೆರವು ಕೋರಿದ ಸಿಎಂ
ಮೂನಾರ್ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಮೃತರ ಕುಟುಂಬಕ್ಕೆ 5ಲ.ರೂ.ಗಳ ಪರಿಹಾರ ಘೋಷಿಸಿದ್ದಾರೆ. ಇಡುಕ್ಕಿ ಜಿಲ್ಲೆಯ ಮೂನಾರ್ ಸಮೀಪದ ರಾಜಮಲೈನಲ್ಲಿ ಉಂಟಾಗಿರುವ ಭೂಕುಸಿತದ ಸಲುವಾಗಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣಾ ಕಾರ್ಯ ತ್ವರಿತವಾಗಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ. ಪರಿಹಾರ ಕಾರ್ಯಕ್ಕೆ ಹೆಲಿಕಾಪ್ಟರ್ ಸೇವೆ ಒದಗಿಸುವಂತೆ ಕೇಂದ್ರವನ್ನು ಕೋರಿದ್ದಾರೆ. ಆದರೆ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು , ಇಲ್ಲಿನ ವಾತಾವರಣ ತೀರಾ ವಿಷಮಿಸಿದ್ದು, ಸಂತ್ರಸ್ತರ ಏರ್‌ಲಿಫ್ಟ್ ಕೂಡಾ ಸದ್ಯ ಕಷ್ಟಸಾಧ್ಯವೆನಿಸಿದೆ ಎಂದಿದ್ದಾರೆ. ಭಾರತೀಯ ವಾಯುಪಡೆ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧತೆ ನಡೆಸಿದೆ.
2ಲ.ರೂ.ಪರಿಹಾರ ಪ್ರಕಟಿಸಿದ ಪ್ರಧಾನಿ
ಮೂನಾರ್ ಪೆಟ್ಟಿಮುಡಿ ಬೆಟ್ಟ ಕುಸಿದ ದುರಂತ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಆಘಾತ ವ್ಯಕ್ತಪಡಿಸಿದ್ದು, ಸಾವನ್ನಪ್ಪಿದ ನತದೃಷ್ಟರ ಕುಟುಂಬಗಳಿಗೆ ತಲಾ 2ಲ.ರೂ.ಹಾಗೂ ಗಾಯಾಳುಗಳ ಚಿಕಿತ್ಸೆಗೆ 50ಸಾವಿರ ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ. ಹಾಗೆಯೇ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಎನ್‌ಡಿಆರ್‌ಎಫ್ ಡಿಜಿಯವರ ಜೊತೆ ಮಾತನಾಡಿದ್ದು, ಪರಿಹಾರ ತಂಡ ಇಷ್ಟರಲ್ಲೇ ಸ್ಥಳಕ್ಕೆ ತಲುಪಿದೆ. ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲಾಗುವುದು ಎಂದು ತಿಳಿಸಿದ್ದಾರೆ .

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!